ಕರ್ನಾಟಕ

karnataka

ETV Bharat / bharat

Repeal of 3 farm laws: ಅನ್ಯಾಯದ ವಿರುದ್ಧದ ವಿಜಯ ಎಂದ ರಾಗಾ ; ಸಂಸತ್ತಿನಲ್ಲಿ ಕೃಷಿ ಕಾನೂನುಗಳು ರದ್ದಾಗೋ ವರೆಗೂ ಪ್ರತಿಭಟನೆ - ಟಿಕಾಯತ್​ - ಅನ್ಯಾಯದ ವಿರುದ್ಧದ ವಿಜಯಕ್ಕೆ ರಾಗಾ ಅಭಿನಂದನೆ

" ದೇಶದ ಅನ್ನದಾತ ಸತ್ಯಾಗ್ರಹದಿಂದ ದುರಹಂಕಾರದ ತಲೆತಗ್ಗುವಂತೆ ಮಾಡಿದ್ದಾನೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು" ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

Repeal of 3 farm laws:
Repeal of 3 farm laws:

By

Published : Nov 19, 2021, 10:47 AM IST

Updated : Nov 19, 2021, 12:30 PM IST

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಪ್ರಧಾನಿ ನರೇಂದ್ರ ಮೋದಿ ಮಹತ್ತರ ಘೋಷಣೆ ಹೊರಡಿಸಿದ್ದು (PM Narendra Modi announces to repeal all three farm laws) , ರೈತರ ಹೋರಾಟಕ್ಕೆ ಬೆಂಬಲಿಸಿದ್ದ ಎಲ್ಲರೂ ವಿಜಯವನ್ನ ಸಂಭ್ರಮಿಸುತ್ತಿದ್ದಾರೆ. ಆದರೆ ರೈತ ಮುಖಂಡ, ಭಾರತೀಯ ಕಿಸಾನ್​ ಯೂನಿಯನ್​ ರಾಷ್ಟ್ರೀಯ ವಕ್ತಾರ​ (National spokesperson of Bhartiya Kisan Union -BKU) ರಾಕೇಶ್ ಟಿಕಾಯತ್​ (Rakesh Tikait) ಮಾತ್ರ ಸಂಸತ್ತಿನಲ್ಲಿ ಕೃಷಿ ಕಾನೂನುಗಳು ರದ್ದಾಗೋ ವರೆಗೂ ಆಂದೋಲನ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ರಾಕೇಶ್ ಟಿಕಾಯತ್ ಪ್ರತಿಕ್ರಿಯೆ

"ಆಂದೋಲನವನ್ನು ತಕ್ಷಣವೇ ಹಿಂಪಡೆಯುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಕನಿಷ್ಠ ಬೆಂಬಲ ಬೆಲೆ (MSP) ಜೊತೆಗೆ, ರೈತರ ಇತರ ಸಮಸ್ಯೆಗಳನ್ನು ಸರ್ಕಾರವು ಚರ್ಚಿಸಬೇಕು" ಎಂದು ಟ್ವೀಟ್​ (Rakesh Tikait tweet) ಮಾಡಿದ್ದಾರೆ.

ಚುನಾವಣಾ ಗಿಮಿಕ್

ಮಹಾರಾಷ್ಟ್ರ ಪಾಲ್ಘರ್​ ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟಿಕಾಯತ್​, ಸಂಸತ್ತಿನಲ್ಲಿ ಕಾನೂನು ಹಿಂಪಡೆಯುವವರೆಗೂ ರೈತರು ಹೋರಾಟ ಮುಂದುವರಿಸಲಿದ್ದಾರೆ. ಎಂಎಸ್‌ಪಿ ಗ್ಯಾರಂಟಿ ಕಾಯ್ದೆಯನ್ನು ರಚಿಸಬೇಕು. ಇದು ರೈತರ ವಿಜಯವಾಗಿದೆ - ಮೃತಪಟ್ಟ 750ಕ್ಕೂ ಹೆಚ್ಚು ರೈತರಿಗೆ ಮತ್ತು ಈ ಆಂದೋಲನದಲ್ಲಿ ಭಾಗಿಯಾದ ಆದಿವಾಸಿಗಳು, ಕಾರ್ಮಿಕರು, ಮಹಿಳೆಯರಿಗೆ ವಿಜಯವನ್ನು ಸಮರ್ಪಿಸಲಾಗಿದೆ. ಸರ್ಕಾರದ ಈ ನಿರ್ಧಾರ ಚುನಾವಣಾ ಗಿಮಿಕ್ ಎಂದು ತೋರುತ್ತದೆ. ಮೋದಿ ಸರ್ಕಾರದ ಗ್ರಾಫ್ ಕುಸಿಯುತ್ತಿರುವ ಮತ್ತು ಅವರ ಇಮೇಜ್ ಮೇಲೆ ಪರಿಣಾಮ ಬೀರುತ್ತಿರುವ ರೀತಿಯನ್ನು ಇದು ತೋರಿಸುತ್ತದೆ. ಅವರಿಗೆ ಲಾಭ ಇದ್ದಾಗ ಮಾತ್ರ ಒತ್ತಡದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi tweet), "ಸತ್ಯಾಗ್ರಹದಿಂದ ದೇಶದ ಅನ್ನದಾತ ದುರಹಂಕಾರದ ತಲೆ ತಗ್ಗಿಸಿದ್ದಾನೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು. ಜೈ ಹಿಂದ್, ಜೈ ಕಿಸಾನ್​" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Big Breaking.. ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿ ಮೋದಿ ಘೋಷಣೆ..!

ಅಲ್ಲದೇ ಈ ಹಿಂದೆ ಮಾಧ್ಯಮಗಳ ಮುಂದೆ, "ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಸರ್ಕಾರವು ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆದೇ ಪಡೆಯುತ್ತದೆ" ಎಂದು ಹೇಳಿದ್ದ ವಿಡಿಯೋ ತುಣುಕನ್ನ ಸಹ ರಾಗಾ ಹಂಚಿಕೊಂಡಿದ್ದಾರೆ.

ಒಳ್ಳೆ ಸುದ್ದಿ. ಪ್ರತಿ ಪಂಜಾಬಿಯ ಬೇಡಿಕೆಗಳಿಗೆ ಸ್ಪಂದಿಸುವುದಕ್ಕಾಗಿ ಮತ್ತು ಗುರುನಾನಕ್ ಜಯಂತಿಯ ಪುಣ್ಯ ಸಂದರ್ಭದಲ್ಲಿ 3 'ಕಪ್ಪು ಕಾನೂನು'ಗಳನ್ನು ರದ್ದುಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ಧನ್ಯವಾದಗಳು. ರೈತರಿಲ್ಲ ಎಂದರೆ ಆಹಾರ ಇಲ್ಲ (#NoFarmers_NoFood) ಎಂಬ ಹ್ಯಾಶ್​ ಟ್ಯಾಗ್​ನೊಂದಿಗೆ ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

"ಇದು, ಇಷ್ಟು ದಿನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿಜಯವಾಗಿದೆ. 700ಕ್ಕೂ ಹೆಚ್ಚು ಜನರು ಸತ್ತರು. ಕೇಂದ್ರವೇ ತಪ್ಪಿತಸ್ಥರೆಂದು ತೋರುತ್ತದೆ. ಆದರೆ ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ ಹೊರುತ್ತಾರೆ? ಈ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ" ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Last Updated : Nov 19, 2021, 12:30 PM IST

ABOUT THE AUTHOR

...view details