ನವದೆಹಲಿ: ಅಕ್ರಮ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲ ಸಕ್ರಮವಾದ ಅಪ್ಲಿಕೇಶನ್‌ಗಳ ಶ್ವೇತಪಟ್ಟಿ ಸಿದ್ಧಪಡಿಸಲಿದೆ. ಅಲ್ಲದೇ, ಶ್ವೇತಪಟ್ಟಿಯಲ್ಲಿರುವ ಆ್ಯಪ್ಗಳು ಮಾತ್ರವೇ ಆಪ್ ಸ್ಟೋರ್‌ನಲ್ಲಿ ಹೋಸ್ಟ್ ಮಾಡುವುದನ್ನು ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಖಚಿತ ಪಡಿಸಲಿದೆ.
ಅಕ್ರಮ ಲೋನ್ ಆ್ಯಪ್‌ಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅಕ್ರಮ ಲೋನ್ ಅಪ್ಲಿಕೇಶನ್‌ಗಳಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮನಿ ಲಾಂಡರಿಂಗ್‌ಗೆ ಬಳಸಬಹುದಾದ 'ಬಾಡಿಗೆ' ಖಾತೆಗಳನ್ನು ಆರ್‌ಬಿಐ ಮೇಲ್ವಿಚಾರಣೆ ಮಾಡುತ್ತದೆ. ನಿಷ್ಕ್ರಿಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್‌ಬಿಎಫ್‌ಸಿಗಳ ದುರುಪಯೋಗವನ್ನು ತಪ್ಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆನ್ಲೈನ್ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ: ಮನನೊಂದು ಆತ್ಮಹತ್ಯೆ
ಪಾವತಿ ಅಗ್ರಿಗೇಟರ್‌ಗಳ ನೋಂದಣಿಯನ್ನು ಸಮಯದ ಮಿತಿಯೊಳಗೆ ಪೂರ್ಣಗೊಳಿಸುವುದನ್ನು ಆರ್‌ಬಿಐ ಖಚಿತಪಡಿಸುತ್ತದೆ. ಅದರ ನಂತರ ಯಾವುದೇ ನೋಂದಾಯಿಸದ ಪಾವತಿ ಸಂಗ್ರಾಹಕಗಳನ್ನು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ. ಅಲ್ಲದೇ. ಶೆಲ್ ಕಂಪನಿಗಳನ್ನು ಗುರುತಿಸಲು ಮತ್ತು ಅವುಗಳ ದುರುಪಯೋಗವನ್ನು ತಡೆಗಟ್ಟಲು ನೋಂದಣಿ ರದ್ದುಗೊಳಿಸುವಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಲಾಗಿದೆ.