ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನಗದು ಹರಿವನ್ನು ಸರಾಗಗೊಳಿಸಲು, ಮತ್ತು ಏರಿಳಿತವನ್ನು ತಪ್ಪಿಸಲು ಕೇಂದ್ರ ಸರ್ಕಾರಕ್ಕೆ Ways and Means Advances (WMA) ಮಿತಿಯನ್ನು 50 ಸಾವಿರ ಕೋಟಿ ರೂಪಾಯಿಗೆ ಮಿತಿಗೊಳಿಸಿರುವುದಾಗಿ ಸೋಮವಾರ ಹೇಳಿದೆ.
2022ರ ಹಣಕಾಸು ವರ್ಷದ ಎರಡನೇ ಅವಧಿಗೆ (H2FY22) ಅಂದರೆ ಅಕ್ಟೋಬರ್ 2021ರಿಂದ ಮಾರ್ಚ್ 2022ರವರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ನಗದು ಹರಿವಿನ ಏರಿಳಿತವನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಸರಳವಾಗಿ WMA..
ಪ್ರತಿ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂತಿಷ್ಟು ಹಣವನ್ನು ಸಾಲ ನೀಡಬೇಕೆಂದು ನಿರ್ಧರಿಸುತ್ತದೆ. ಒಂದೊಂದು ಹಣಕಾಸು ವರ್ಷಕ್ಕೂ ಮತ್ತು ಹಣಕಾಸು ವರ್ಷದ ಪ್ರಥಮಾರ್ಧ ಮತ್ತು ದ್ವಿತಿಯಾರ್ಧದಲ್ಲಿ ಇಂತಿಷ್ಟೇ ಹಣವನ್ನು ಸಾಲವಾಗಿ ನೀಡಬೇಕು ಎಂದು ನಿರ್ಧರಿಸಲಾಗುತ್ತದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರವಲ್ಲದೇ, ಹಣದ (cash) ಹರಿವು ಸಮರ್ಪಕವಾಗಿಲ್ಲ ಎನಿಸಿದಾಗ ಎಷ್ಟು ಹಣವನ್ನು ಸಾಲವಾಗಿ ಅಥವಾ ಮುಂಗಡವಾಗಿ (Advance) ನೀಡಬೇಕೆಂದು ಆರ್ಬಿಐ ನಿರ್ಧಾರ ಮಾಡುತ್ತದೆ. ಇದನ್ನೇ Ways and Means Advances ಎಂದು ಆರ್ಥಿಕ ಪರಿಭಾಷೆಯಲ್ಲಿ ಕರೆಯಲಾಗುತ್ತದೆ.
ಈಗ ಕೇಂದ್ರ ಸರ್ಕಾರಕ್ಕೆ ಎಷ್ಟು ಮುಂಗಡವನ್ನಾಗಿ, ಸಾಲವನ್ನಾಗಿ ನೀಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡಿದ್ದು, ಹಣಕಾಸು ವರ್ಷದ ದ್ವಿತೀಯಾರ್ಧಕ್ಕೆ 50 ಸಾವಿರ ಕೋಟಿ ರೂಪಾಯಿ ಫಿಕ್ಸ್ ಮಾಡಿದೆ.
ಇದನ್ನೂ ಓದಿ:ಗ್ಲಾನ್ಸ್ ಖರೀದಿಗಾಗಿ 300 ಕೋಟಿ ಹೂಡಿಕೆಗೆ ಮುಂದಾದ Reliance!