ಕರ್ನಾಟಕ

karnataka

ETV Bharat / bharat

ಗುಜರಾತ್​ ವಿಧಾನಸಭೆ ಚುನಾವಣೆ: ಪತ್ನಿಗೆ ಮತ ಹಾಕುವಂತೆ ಜನರಲ್ಲಿ ಜಡೇಜಾ ಮನವಿ - ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ

ಗುಜರಾತ್​ ವಿಧಾನಸಭೆ ಚುನಾವಣೆಗೆ ಮತದಾನ ದಿನ ಸಮೀಪಿಸುತ್ತಿದ್ದಂತೆ ಆಭ್ಯರ್ಥಿಗಳ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಮತ್ತೊಂದೆಡೆ ಹೋರಾಟದ ಹುಮ್ಮಸ್ಸಿನಲ್ಲಿರುವ ಆ ಪಕ್ಷದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ಮಧ್ಯೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ಜಾಮ್‌ನಗರ ನಗರದಿಂದ ಸ್ಫರ್ಧಿಸಲಿದ್ದು, ಪತ್ನಿಗೆ ಬೆಂಬಲ ನೀಡುವಂತೆ ಕ್ರಿಕೆಟಿಗ ರವೀಂದ್ರ ಜಡೇಜಾ ಮನವಿ ಮಾಡಿದ್ದಾರೆ.

Ravindra Jadeja appeals  Jamnagar voters to vote for his wife  Ravindra Jadeja appeals to Jamnagar voters  ಗುಜರಾತ್​ ವಿಧಾನಸಭೆ ಚುನಾವಣೆ  ನನ್ನ ಪತ್ನಿಗೆ ಮತ ಹಾಕುವಂತೆ ಜನರಲ್ಲಿ ಜಡೇಜಾ ಮನವಿ  ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತಯಾರಿ  ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ
ನನ್ನ ಪತ್ನಿಗೆ ಮತ ಹಾಕುವಂತೆ ಜನರಲ್ಲಿ ಜಡೇಜಾ ಮನವಿ

By

Published : Nov 14, 2022, 12:19 PM IST

ಜಾಮ್​ನಗರ:ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಗ್ಗೆ ರವೀಂದ್ರ ಜಡೇಜಾ ಗುಜರಾತಿ ಭಾಷೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಪತ್ನಿಗೆ ಮತ ಹಾಕುವಂತೆ ರವೀಂದ್ರ ಜಡೇಜಾ ಜಾಮ್‌ನಗರ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ಇಂದು ರಿವಾಬಾ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ರವೀಂದ್ರ ಜಡೇಜಾ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದರು. ಇದರಲ್ಲಿ ರಿವಾಬಾಗೆ ಮತ ಹಾಕುವ ಮೂಲಕ ಜಾಮ್‌ನಗರದ ಜನರು ಯಶಸ್ವಿಯಾಗಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ. ತಮ್ಮ ಪತ್ನಿಗೆ ಮತ ನೀಡುವಂತೆ ಅವರು ಜಾಮ್‌ನಗರದ ಜನತೆಗೆ ಮಾತ್ರವಲ್ಲದೆ ಕ್ರಿಕೆಟ್ ಪ್ರೇಮಿಗಳನ್ನೂ ಸಹ ಕೋರಿದ್ದಾರೆ.

'ಗುಜರಾತ್ ವಿಧಾನಸಭಾ ಚುನಾವಣೆಯು ಟಿ20 ಕ್ರಿಕೆಟ್‌ನಂತೆ ಮುನ್ನಡೆಯುತ್ತಿದೆ. ನನ್ನ ಪ್ರೀತಿಯ ಜಾಮ್‌ನಗರ ನಿವಾಸಿಗಳು ಮತ್ತು ಎಲ್ಲಾ ಕ್ರಿಕೆಟ್ ಪ್ರೇಮಿಗಳು ವಿಧಾನಸಭಾ ಚುನಾವಣೆ ಬಂದಿರುವುದು ನಿಮಗೆಲ್ಲರಿಗೂ ತಿಳಿದಿದೆ. ನನ್ನ ಪತ್ನಿ ರಿವಾಬಾ ಜಡೇಜಾ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಅವರ ಗೆಲುವಿನ ವಾತಾವರಣ ನಿರ್ಮಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಮಾಜಿ ಶಾಸಕ ಧರ್ಮೇಂದ್ರ ಸಿಂಗ್ ಜಡೇಜಾ ಸ್ಥಾನಕ್ಕೆ ರಿವಾಬಾ ಜಡೇಜಾ ಆಯ್ಕೆಯಾಗಿದ್ದಾರೆ. ಅವರು ಜಾಮ್‌ನಗರ ಉತ್ತರ ವಿಧಾನಸಭೆಯಿಂದ ಗೆಲುವು ದಾಖಲಿಸಿದ್ದರು. ಬಿಜೆಪಿ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಒಟ್ಟು ಆರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 14 ಮಹಿಳೆಯರಿಗೆ ಅವಕಾಶ ಸಿಕ್ಕಿದೆ.

ಓದಿ:ಗುಜರಾತ್ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ವಡ್ಗಾಮ್‌ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಕಣಕ್ಕೆ

ABOUT THE AUTHOR

...view details