ಕರ್ನಾಟಕ

karnataka

ETV Bharat / bharat

ಕೊರೊನಾ ಪತ್ತೆಯಲ್ಲಿ RT-PCRಗೆ ಪೂರಕವಾಗಿ 'ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್' ಪರಿಣಾಮಕಾರಿ - RAT

ಕೋವಿಡ್​​ ಸೋಂಕಿತರನ್ನು ಸುಲಭವಾಗಿ ಪತ್ತೆ ಹೆಚ್ಚಲು ಹಾಗೂ ಸೋಂಕಿನಿಂದ ಮೃತಪಟ್ಟವರನ್ನು ತ್ವರಿತವಾಗಿ ಕಂಡು ಹಿಡಿಯಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಪರಿಣಾಮಕಾರಿಯಾಗಿದೆ.

RAT
'ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್

By

Published : May 6, 2021, 7:55 AM IST

ನವದೆಹಲಿ: ನಮ್ಮ ದೇಹದಲ್ಲಿ ಕೊರೊನಾ ಸೋಂಕು ಇದೆಯೇ ಎಂಬುದನ್ನು ತ್ವರಿತ ಗತಿಯಲ್ಲಿ ಪತ್ತೆ ಮಾಡಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಮಾಡಲಾಗುತ್ತದೆ. ಇದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಬಹಳ ಪೂರಕವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೇ ಸೋಂಕಿನಿಂದ ಮೃತಪಟ್ಟವರನ್ನು ತ್ವರಿತವಾಗಿ ಕಂಡು ಹಿಡಿಯಲು ಇದು ಸೂಕ್ತ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಂತಾರಾಜ್ಯ ಪ್ರಯಾಣ ಕೈಗೊಳ್ಳುವ ಆರೋಗ್ಯವಂತ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ಬೇಕಿಲ್ಲ ಎಂದು ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದ ಬೆನ್ನಲ್ಲೇ ಸರ್ಕಾರ RAT ಮಹತ್ವವನ್ನು ಒತ್ತಿ ಹೇಳಿದೆ.

ಆರ್‌ಟಿ-ಪಿಸಿಆರ್​​​ಗೆ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪೂರಕವಾಗಿದ್ದು, ಮೂಗಿನ ದ್ರವವನ್ನು ಸಂಗ್ರಹಿಸಿ ಮಾಡುವ ಈ ಪರೀಕ್ಷೆಯ ವರದಿ 30 ನಿಮಿಷದೊಳಗೆ ಬರುತ್ತದೆ. ಆದರೆ ಗಂಟಲಿನ ದ್ರವವನ್ನು ತೆಗೆದುಕೊಂಡು ಪರೀಕ್ಷಿಸುವ ಆರ್‌ಟಿ-ಪಿಸಿಆರ್ ವರದಿ ಬರಲು ಹೆಚ್ಚು ಸಮಯ ಬೇಕಾಗಿದೆ. ಹೀಗಾಗಿ ಕೋವಿಡ್​ ಮೊದಲ ಹಂತದ ಪರೀಕ್ಷೆಯಾಗಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಬಹಳ ಉಪಯುಕ್ತವಾಗಿದೆ. ಇದರಿಂದ RT-PCR ವರದಿ ಬರುವವರೆಗೆ ಕಾಯುವ ಬದಲು ರೋಗಿಗಳನ್ನು ಮೊದಲೇ ಪ್ರತ್ಯೇಕಿಸಿ, ಚಿಕಿತ್ಸೆ ನೀಡಬಹುದಾಗಿದೆ.

ಇದನ್ನೂ ಓದಿ: ಅಂತರ್‌ರಾಜ್ಯ ಪ್ರಯಾಣಕ್ಕೆ RT-PCR ವರದಿ ಬೇಕಿಲ್ಲ: ಕೋವಿಡ್‌ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ

ಸೋಂಕಿನ ತೀವ್ರತೆ, ರೋಗ ಲಕ್ಷಣಗಳು ಹೆಚ್ಚಿರುವ ಜನರಿಗಂತೂ RAT ಪರಿಣಾಮಕಾರಿಯಾಗಿದೆ. ಕೋವಿಡ್​ ಪೀಡಿತ ರಾಜ್ಯಗಳು, ನಗರಗಳಲ್ಲಿ ಸ್ಕ್ರೀನಿಂಗ್ ವೇಳೆಯಲ್ಲಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸುವುದು ಸೂಕ್ತ. ಇದರಿಂದ ಸೋಂಕಿತರನ್ನು ಸುಲಭವಾಗಿ ಪತ್ತೆ ಹೆಚ್ಚಬಹುದು ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪೌಲ್​ ಹೇಳಿದ್ದಾರೆ.

ಕೋವಿಡ್​ನಿಂದ ಮೃತಪಟ್ಟವರ ಪತ್ತೆಗೆ RAT ಉಪಕಾರಿ - ಮಮತಾ ಬ್ಯಾನರ್ಜಿ

ಅನೇಕ ಆಸ್ಪತ್ರೆಗಳಲ್ಲಿ ಮೃತರ ಶವಗಳನ್ನು ಅಂತ್ಯಕ್ರಿಯೆಗೆ ನೀಡದೆ ರಾಶಿ ಹಾಕಲಾಗುತ್ತಿದೆ. ವ್ಯಕ್ತಿ ಕೊರೊನಾದಿಂದ ಸತ್ತಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿದ ಬಳಿಕವೇ ಆಸ್ಪತ್ರೆಗಳು ಮೃತದೇಹಗಳನ್ನು ತಡವಾಗಿ ಹಸ್ತಾಂತರಿಸುತ್ತಿವೆ. ಇದಕ್ಕಾಗಿ ಆರ್‌ಟಿ-ಪಿಸಿಆರ್ ವರದಿಗಾಗಿ ಕಾಯುತ್ತಾ ಕೂರುತ್ತವೆ. ರೋಗಿ ಸತ್ತು ಎರಡು-ಮೂರು ದಿನಗಳಾದರೂ ಕುಟುಂಬಸ್ಥರಿಗೆ ಶವಸಂಸ್ಕಾರ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾನೆಯೇ ಇಲ್ಲವೇ ಎಂಬುದನ್ನು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕವೇ ತ್ವರಿತವಾಗಿ ಪತ್ತೆ ಮಾಡಬಹುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ABOUT THE AUTHOR

...view details