ETV Bharat Karnataka

ಕರ್ನಾಟಕ

karnataka

ETV Bharat / bharat

ಮಹಿಳೆಯ ಹೊಟ್ಟೆಯಲ್ಲಿನ 4 ಕೆಜಿ ಗಡ್ಡೆ ಹೊರತೆಗೆದು ಜೀವ ಉಳಿಸಿದ ವೈದ್ಯರು...! - Pseuromexma peritorius

ಕೋಲ್ಕತ್ತಾದ ನಿಲ್ ರತನ್ ಸಿರ್ಕಾರ್ (ಎನ್‌ಆರ್‌ಎಸ್) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಜೆಲ್ಲಿಯಂತಿರುವ ಗಡ್ಡೆಯನ್ನು ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರು.

NRS Hospital
ಮಹಿಳೆಯ ಹೊಟ್ಟೆಯಲ್ಲಿನ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ಹೊರತೆಗೆದು ಜೀವ ಉಳಿಸಿದ ವೈದ್ಯರು
author img

By

Published : Mar 23, 2023, 9:51 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾದ ನಿಲ್ ರತನ್ ಸಿರ್ಕಾರ್ (ಎನ್‌ಆರ್‌ಎಸ್) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೌದು, 46 ವರ್ಷದ ಮಹಿಳೆಯೊಬ್ಬರ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ 4 ಕೆಜಿ ಜೆಲ್ಲಿಯಂತಿರುವ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ.

ಈ ಮಹಿಳೆಯು 'ಸ್ಯೂರೋಮೆಕ್ಸ್ಮಾ ಪೆರಿಟೋರಿಯಸ್' ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು. ಮಹಿಳೆಯ ಹೊಟ್ಟೆಯಲ್ಲಿದ್ದ ಈ ದ್ರವ ರೂಪದ ಗಡ್ಡೆಗೆ ಆಡುಭಾಷೆಯಲ್ಲಿ 'ಜೆಲ್ಲಿ ಬೆಲ್ಲಿ' ಎಂದು ಕರೆಯಲಾಗುತ್ತದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ನಾಡಿಯಾ ನಿವಾಸಿ ಚಪ್ಪಿಯ ಶೇಖ್ ಹಲವು ತಿಂಗಳುಗಳಿಂದ ಆಹಾರದ ಬಗ್ಗೆ ಅಲರ್ಜಿ ಗುಣ ಬೆಳೆಸಿಕೊಂಡಿದ್ರು.

'ಸ್ಯೂರೋಮೆಕ್ಸ್ಮಾ ಪೆರಿಟೋರಿಯಸ್' ಕಾಯಿಲೆ:ಸ್ವಲ್ಪ ತಿಂದರೂ ಹೊಟ್ಟೆ ಅಗಾಧವಾಗಿ ಊದಿಕೊಳ್ಳುತ್ತಿತ್ತು. ಮಹಿಳೆಯ ಹೊಟ್ಟೆಯನ್ನು ಮುಟ್ಟಿ ನೋಡಿದರೆ, ಹೊರಗಿನಿಂದ ಧಾನ್ಯದಂತಹ ಇರುವ ವಸ್ತುವನ್ನು ಮುಟ್ಟಿದ ಅನುಭವ ಆಗುತ್ತಿತ್ತು. ನಂತರ ಅವರನ್ನು ಕೋಲ್ಕತ್ತಾದ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಆಕೆಯ ಸಿಟಿ ಸ್ಕ್ಯಾನ್ ಮಾಡಲಾಯಿತು. ಬಳಿಕ ಆ ಮಹಿಳೆಗೆ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು. ಅಂತಿಮವಾಗಿ, ಶಸ್ತ್ರಚಿಕಿತ್ಸಕ ವಿಭಾಗದ ಪ್ರಾಧ್ಯಾಪಕ ಡಾ.ಉಪ್ಪಲ್ ಅವರ ಮೇಲ್ವಿಚಾರಣೆಯಲ್ಲಿ ರೋಗಿಯ ಚಿಕಿತ್ಸೆ ಪ್ರಾರಂಭವಾಯಿತು.

ಡಾ.ಉಪ್ಪಲ್ ಹೇಳಿದ್ದೇನು?:"ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸೀರೊಮೆಕ್ಸ್ಮಾ ಪೆರಿಟೋರಿಯಸ್ ಎಂಬ ಅಪರೂಪದ ಕಾಯಿಲೆ ಅವರಿಗೆ ಇದೆ. ಇದನ್ನು ಆಡುಮಾತಿನಲ್ಲಿ 'ಜೆಲ್ಲಿ ಬೆಲ್ಲಿ' ಎಂದು ಕರೆಯಲಾಗುತ್ತದೆ" ಎಂದು ವೈದ್ಯರು ಈಟಿವಿ ಭಾರತ್‌ಗೆ ತಿಳಿಸಿದರು. "ಇದು ನೋಡುವುದಕ್ಕೆ ಗಡ್ಡೆಯಂತೆ ಘನವಾಗಿರುವಂತೆ ಕಾಣಿಸುತ್ತದೆ. ಆದರೆ, ಈ ರೋಗದಲ್ಲಿ ಅದು ದ್ರವ ರೂಪದ ಗಡ್ಡೆಯಂತೆ ಇರುತ್ತದೆ. ಈ ರೀತಿಯ ರೋಗವು ಅಪೆಂಡಿಕ್ಸ್ ಅಥವಾ ಅಂಡಾಶಯದಿಂದ ಪ್ರಾರಂಭವಾಗುತ್ತದೆ. ಗಡ್ಡೆಯಲ್ಲಿರುವ ಜೀವಕೋಶಗಳು ಇದ್ದಕ್ಕಿದ್ದಂತೆ ರಂಧ್ರದ ಮೂಲಕ ಹೊರಬಂದು ಹೊಟ್ಟೆಯಾದ್ಯಂತ ಹರಡುತ್ತವೆ. ಪರಿಣಾಮ ಇದು ಜೆಲ್ಲಿಯ ರೂಪವನ್ನು ಪಡೆಯುತ್ತದೆ.

ಸೈಕ್ಲೋ ರಿಡಕ್ಟಿವ್ ಚಿಕಿತ್ಸೆಯಿಂದ ಗುಣ:"ಸೈಕ್ಲೋ ರಿಡಕ್ಟಿವ್ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಆದರೆ, ಗಡ್ಡೆಯಿಂದ ಜೆಲ್ಲಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಮುಂದುವರಿಯುವ ಚಿಕಿತ್ಸೆಯನ್ನು ಸರಳವಾಗಿ ಕೀಮೋಥೆರಪಿ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯ ಜೊತೆಗೆ, ಕೀಮೋವನ್ನು ನೀಡಲಾಗುತ್ತದೆ. ಇದರಿಂದ ರೋಗಿಯು ಬದುಕುಳಿಯುವ ಸಾಧ್ಯತೆ ಶೇ.80ಕ್ಕಿಂತ ಕಡಿಮೆಯಿದೆ" ವೈದ್ಯರು ತಿಳಿದರು.

ಎಂಟು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ:ಪಶ್ಚಿಮ ಬಂಗಾಳದಲ್ಲಿ ಚಿಕಿತ್ಸಾ ವಿಧಾನ ಲಭ್ಯವಿಲ್ಲ. ಇದರ ಮಧ್ಯೆಯೂ ಕಳೆದ ಶನಿವಾರ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಹಿಳೆಯ ದೇಹದಿಂದ 4 ಕೆಜಿ ಜೆಲ್ಲಿಯಂತಿರುವ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ಹೊರತೆಗೆಯಲಾಗಿದೆ. ಸುಮಾರು ಎಂಟು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಈ ಮಹಿಳೆಯನ್ನು ಡಿಶ್ಚಾರ್ಜ್​ ಮಾಡಲಾಗುವುದು. ನಂತರ ಆಕೆಯನ್ನು ಕ್ಯಾನ್ಸರ್ ವಿಭಾಗಕ್ಕೆ ಕರೆದೊಯ್ದು ಅಲ್ಲಿ ಕಿಮೊಥೆರಪಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ, ಮಹಿಳೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ. ಮಹಿಳೆ ನಿಧಾನವಾಗಿ ಚೆತರಿಸಿಕೊಳ್ಳುತ್ತಾಳೆ. ಕೆಲವು ತಿಂಗಳುಗಳ ಸಾಮಾನ್ಯರಂತೆ ಅವಳು ಕೂಡಾ ಜೀವನಕ್ಕೆ ನಡೆಸಬಹುದು'' ಎಂದು ವೈದ್ಯರು ತಿಳಿಸಿದರು.

ಇದನ್ನೂ ಓದಿ:ಬಾದಾಮಿ ಕ್ಷೇತ್ರದಲ್ಲಿ ನಾಳೆ ಸಿದ್ದರಾಮಯ್ಯ ಪ್ರವಾಸ.. ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

ABOUT THE AUTHOR

...view details