ಔರಂಗಾಬಾದ್(ಬಿಹಾರ):ವೈದ್ಯಕೀಯ ಲೋಕದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದಾಗಿರುವ ಪ್ಲಾಸ್ಟಿಕ್ ಮಗುವೊಂದು ಬಿಹಾರದ ಔರಂಗಾಬಾದ್ನಲ್ಲಿ ಜನಸಿದೆ. ಇಲ್ಲಿನ ಸದರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನವಜಾತ ಶಿಶುವಿಗೆ ಜನ್ಮ ನೀಡಿದ್ದು, ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಜನಿಸುವ 11 ಲಕ್ಷ ಮಕ್ಕಳಲ್ಲಿ ಒಂದು ಕೊಲೊಡಿಯನ್ ಬೇಬಿ(ಪ್ಲಾಸ್ಟಿಕ್ ಮಗು) ಜನಿಸುತ್ತದೆ. ಇದೀಗ ಔರಂಗಾಬಾದ್ನಲ್ಲಿ ಈ ಮಗುವಿನ ಜನನವಾಗಿದ್ದು, ಪ್ರತ್ಯೇಕವಾಗಿರಿಸಿ ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನುವಂಶಿಕ ಸಮಸ್ಯೆಯಿಂದಾಗಿ ಈ ರೀತಿಯ ಮಗುವಿನ ಜನನವಾಗುತ್ತದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದು, ಮಗು ಎಷ್ಟು ದಿನ ಬದುಕುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನವಜಾತ ಶಿಶು ಘಟಕದ ವೈದ್ಯಾಧಿಕಾರಿ ಡಾ. ದಿನೇಶ್ ದುಬೆ ತಿಳಿಸಿದ್ದಾರೆ. ಜೊತೆಗೆ ಕೊಲೊಡಿಯನ್ ಮಗುವಿನ ಜನನ ವಿಶ್ವದ ಅಪರೂಪ ಕಾಯಿಲೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.