ಒಡಿಶಾ :ಅಪರೂಪದ ಕಪ್ಪು ಹುಲಿಯೊಂದು ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದೊಳಗೆ ಕಂಡು ಬಂದಿದೆ. ತನ್ನ ಪ್ರದೇಶವನ್ನು ಹುಲಿಯು ಗುರುತಿಸುವಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೆಲನಿಸ್ಟಿಕ್ ಟೈಗರ್ ಎಂದು ಕರೆಯಲ್ಪಡುವ ಹುಲಿ ಪ್ರಭೇದವು ಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಹುಲಿ ದಿನದ ಪ್ರಯುಕ್ತ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ಅಪರೂಪದ ಹುಲಿಯ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ.
ಮೆಲನಿಸ್ಟಿಕ್ ಟೈಗರ್ ಎಂಬುದು ವಿಶೇಷ ಪ್ರಭೇದವಾಗಿದ್ದು 2007ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಗುರುತಿಸಲಾಗಿದೆ. ಈ ಹುಲಿಯ ವಿಶೇಷತೆ ಎಂದರೆ ಕಪ್ಪು ಪಟ್ಟೆಗಳು ಗಾಢವಾಗಿದ್ದು, ಹಳದಿ ಪಟ್ಟೆಗಳು ತೆಳುವಾಗಿರುತ್ತದೆ. ಬಂಗಾಳದ ಹುಲಿಗಳಿಗೆ ಹೋಲಿಸಿದರೆ ಸ್ವಲ್ಪ ಸಣ್ಣದಾಗಿ ಕಾಣುತ್ತವೆ.