ಹೈದರಾಬಾದ್:ಹಠಾತ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ ದಾಖಲೆಯ 156 ಕಿಡ್ನಿ ಸ್ಟೋನ್ಸ್ ಹೊರ ತೆಗೆಯಲಾಗಿದ್ದು, ಹೈದರಾಬಾದ್ ವೈದ್ಯರು ಅಪರೂಪದ ಆಪರೇಷನ್ ಮೂಲಕ ಇಷ್ಟೊಂದು ಕಲ್ಲು ಹೊರತೆಗೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ 50 ವರ್ಷದ ಬಸವರಾಜ್ ಮಡಿವಾಳರ್ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಮೂತ್ರಪಿಂಡದಲ್ಲಿ ದೊಡ್ಡ ಗುಂಪಿನ ಕಲ್ಲು ಇರುವುದು ಗೊತ್ತಾಗಿದೆ. ಚಿಕಿತ್ಸೆಗೋಸ್ಕರ ಹೈದರಾಬಾದ್ಗೆ ತೆರಳಿದ್ದು ಇದೀಗ ಯಶಸ್ವಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ:ಬ್ರಿಟನ್ನಲ್ಲಿ ಒಂದೇ ದಿನ 88,376 ಹೊಸ ಕೋವಿಡ್ ಕೇಸ್ ದಾಖಲು
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಪತ್ರೆಯ ಎಂಡಿ ಡಾ.ಚಂದ್ರಮೋಹನ್, ಕಳೆದ ಎರಡು ವರ್ಷಗಳಿಂದ ರೋಗಿ ಕಿಡ್ನಿ ಸ್ಟೋನ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಸಮಯ ಕಳೆದಂತೆ ಕಲ್ಲು ದೊಡ್ಡದಾಗಿವೆ. ಆದರೆ, ಆರಂಭದಲ್ಲಿ ರೋಗಿಯಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ಲ. ಇದೀಗ ಹಠಾತ್ ಆಗಿ ನೋವು ಕಾಣಿಸಿಕೊಂಡಿದೆ ಎಂದಿದ್ದಾರೆ.
ರೋಗಿ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸುಮಾರು ಮೂರು ಗಂಟೆಗಳ ಕಾಲ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ 156ಸ್ಟೋನ್ಸ್ ಹೊರತೆಗೆಯಲಾಗಿದ್ದು, ಆತ ಆರೋಗ್ಯವಾಗಿದ್ದಾನೆಂದು ಹೇಳಿದ್ದಾರೆ. ಓರ್ವ ರೋಗಿಯ ಮೂತ್ರ ಪಿಂಡದಲ್ಲಿ ಇಷ್ಟೊಂದು ಸ್ಟೋನ್ಸ್ ಹೊರತೆಗೆದಿರುವುದು ಇದೇ ಮೊದಲ ಸಲ ಎಂಬ ಮಾಹಿತಿ ಸಹ ತಿಳಿಸಿದ್ದಾರೆ.