ಕರ್ನಾಟಕ

karnataka

ETV Bharat / bharat

ಛತ್ತೀಸ್‌ಗಢ: ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ರಂಧ್ರಗಳ ವಿಚಿತ್ರ ಕರು ಹುಟ್ಟಿದ ವಾರಕ್ಕೆ ಸಾವು - rare calf died three eyed calf dies week after birth in rajnandgaon

ಛತ್ತೀಸ್‌ಗಢದ ನವಗಾಂವ್‌ನಲ್ಲಿ ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ರಂಧ್ರಗಳೊಂದಿಗೆ ವಿಚಿತ್ರವಾಗಿ ಜನಿಸಿದ್ದ ಕರು ಮೃತಪಟ್ಟಿದೆ.

rare calf died three eyed calf dies week after birth in rajnandgaon
ಛತ್ತೀಸ್‌ಗಢ: ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ರಂಧ್ರಗಳ ವಿಚಿತ್ರ ಕರು ಹುಟ್ಟಿದ ವಾರಕ್ಕೆ ಸಾವು

By

Published : Jan 20, 2022, 8:26 PM IST

ನವಗಾಂವ್‌(ಛತ್ತೀಸ್‌ಗಢ): ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ರಂಧ್ರಗಳೊಂದಿಗೆ ವಿಚಿತ್ರವಾಗಿ ಜನಿಸಿದ್ದ ವಾರಕ್ಕೆ ಕರು ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.

ಛತ್ತೀಸ್‌ಗಢ: ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ರಂಧ್ರಗಳ ವಿಚಿತ್ರ ಕರು ಹುಟ್ಟಿದ ವಾರಕ್ಕೆ ಸಾವು

ನವಗಾಂವ್‌ನ ಲೋಧಿ ಗ್ರಾಮದ ರೈತ ಹೇಮಂತ್ ಚಂದೇಲ್ ಎಂಬುವರ ಮನೆಯಲ್ಲಿ ಇದೇ 13 ರಂದು ಜರ್ಸಿ ಹಸುವೊಂದು ಈ ವಿಚಿತ್ರ ಕರುವಿಗೆ ಜನ್ಮ ನೀಡಿತ್ತು. ಸಂಕ್ರಾಂತಿಯ ಮುನ್ನ ದಿನ ಈ ಕರು ಜನಿಸಿದ ಹಿನ್ನೆಲೆಯಲ್ಲಿ ಇದಕ್ಕೆ ಶಿವ ಎಂದು ಹೆಸರಿಟ್ಟಿದ್ದರು.

ಇನ್ನು, ಇದನ್ನು ನೋಡಲು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಜನ ಬಂದು ದೇವರ ಸ್ವರೂಪ ಎಂದು ಭಾವಿಸಿ ಪೂಜೆ ಕೂಡ ಮಾಡಿದ್ದರು. ಆದರೆ, ಇಂದು ಕರು ಮೃತಪಟ್ಟಿದೆ. ಸುದ್ದಿ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕರುವಿನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಕರು ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ. ದೇವರು ನಮ್ಮ ಮನೆಗೆ ಬಂದು ಹೋದನೆಂದು ನಾನು ಭಾವಿಸುತ್ತೇನೆ ಎಂದು ರೈತ ಹೇಮಂತ್‌ ಚಂದೇಲ್‌ ಹೇಳಿದ್ದಾರೆ.

ಭ್ರೂಣದ ಬೆಳವಣಿಗೆ ಸರಿಯಾಗಿ ಆಗದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯ ಪಶು ವೈದ್ಯಾಧಿಕಾರಿ ಡಾ.ಸಂದೀಪ ಇಡೂರಕರ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಕರುಗಳು ತುಂಬಾ ದುರ್ಬಲವಾಗಿರುವ ಜೊತೆಗೆ ದೀರ್ಘಕಾಲ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಕರು ಕೂಡ ಹೆಚ್ಚು ಕಾಲ ಬದುಕುವುದಿಲ್ಲ ಎಂದು ಊಹಿಸಲಾಗಿತ್ತು. ಅಂತಹ ವಿಷಯಗಳನ್ನು ದೇವರಿಗೆ ಹೋಲಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details