ಪ್ರತಾಪ್ಗಢ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರತಾಪ್ಗಢ್ ಜಿಲ್ಲೆಯ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನವನೀತ್ ನಾಯಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ಆರೋಪದಡಿ ಅಮಾನತುಗೊಂಡಿರುವ ಅವರ ವಿರುದ್ಧ ಮತ್ತೊಂದು ಹೊಸ ಆರೋಪ ಕೇಳಿ ಬಂದಿದೆ. ತನ್ನ ವಿರುದ್ಧದ ಕೇಸ್ ಹಿಂಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ.
ಯೂನಿಸೆಫ್ ಉದ್ಯೋಗಿಯಾಗಿದ್ದ ಮಧ್ಯಪ್ರದೇಶದ ಮೂಲದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸ್ ಅಧಿಕಾರಿ ನವನೀತ್ ನಾಯಕ ಸಂಪರ್ಕಕ್ಕೆ ಬಂದಿದ್ದರು. ಆದರೆ, ನಂತರ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ 2021ರ ಜುಲೈನಲ್ಲಿ ಮಹಿಳೆ ದೂರು ದಾಖಲಿಸಿದ್ದರು. ಇದೇ ಕಾರಣಕ್ಕಾಗಿ ಅಕ್ಟೋಬರ್ 12ರಂದು ಸೇವೆಯಿಂದ ನಾಯಕ ಅಮಾನತುಗೊಂಡಿದ್ದರು. ಇದಾದ 4 ದಿನಗಳ ನಂತರ ಅವರು ಅತ್ಯಾಚಾರ ಕೇಸ್ ಕೂಡ ದಾಖಲಾಗಿತ್ತು. ಸದ್ಯ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.