ವಾರಣಾಸಿ(ಉತ್ತರ ಪ್ರದೇಶ):ಮದುವೆಯಾಗುವುದಾಗಿ ನಂಬಿಸಿ, ಮಹಿಳೆಯೋರ್ವಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಕಾಮುಕನೋರ್ವ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಸೋದರ ಸಂಬಂಧಿಯೋರ್ವ ಸಹೋದರಿ ಮೇಲೆ ದುಷ್ಕೃತ್ಯವೆಸಗಿದ್ದಾನೆ. ವಾರಣಾಸಿಯ ಲಾಲ್ಪುರ ಹಾಗೂ ಫುಲ್ಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದ್ದು, ಗರ್ಭಿಣಿಯಾಗುತ್ತಿದ್ದಂತೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂದು ಸಂತ್ರಸ್ತೆ ಲಾಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 2011ರಲ್ಲಿ ಚಂದೌಲಿ ಪ್ರದೇಶದ ಯುವಕನೊಂದಿಗೆ ಯುವತಿ ಮದುವೆ ಮಾಡಿಕೊಂಡಿದ್ದರು. ಕೆಲ ವರ್ಷಗಳ ಬಳಿಕ ಮದುವೆ ಮುರಿದು ಬಿದ್ದಿದೆ. ಈ ವೇಳೆ ಅಮರಜೀತ್ ಎಂಬಾತನ ಪರಿಚಯವಾಗಿದೆ. ಈ ವೇಳೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ತನ್ನ ಮೇಲೆ ಅತ್ಯಾಚಾರವೆಸಗಿದ್ದು, ಗರ್ಭಿಣಿಯಾಗುತ್ತಿದ್ದಂತೆ ಆತ ಗರ್ಭಪಾತ ಮಾಡಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ವರದಕ್ಷಿಣೆಗೋಸ್ಕರ ಕಿರುಕುಳ ಸಹ ನೀಡಲು ಶುರು ಮಾಡಿದ್ದಾನೆಂಬ ಗಂಭೀರ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.