ಕರ್ನಾಟಕ

karnataka

ETV Bharat / bharat

ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ: ಗರ್ಭಿಣಿಯಾಗ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ - ಈಟಿವಿ ಭಾರತ ಕರ್ನಾಟಕ

ಚಿಕ್ಕಪ್ಪನೊಂದಿಗೆ ತೆರಳಿದ್ದ ಬಾಲಕಿಯೋರ್ವಳು ಅತ್ಯಾಚಾರಕ್ಕೊಳಗಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

rape with minor girl in Faridabad
rape with minor girl in Faridabad

By

Published : Sep 16, 2022, 8:11 AM IST

ಫರಿದಾಬಾದ್​​(ಹರಿಯಾಣ):ಅಪ್ರಾಪ್ತ ಬಾಲೆಯೋರ್ವಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಪರಿಣಾಮ ಆಕೆ ಗರ್ಭಿಣಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹರಿಯಾಣದ ಫರಿದಾಬಾದ್​​ನಲ್ಲಿ ಘಟನೆ ನಡೆದಿದೆ. ಗುರುವಾರ ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಅಚ್ಚರಿಯ ಸಂಗತಿಯೆಂದರೆ, ಅಪ್ರಾಪ್ತೆಯ ಮೇಲೆ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕಾದ ವ್ಯಕ್ತಿಯೇ ದುಷ್ಕೃತ್ಯವೆಸಗಿದ್ದಾನೆ. ಈಗಾಗಲೇ ಆತನ ಬಂಧನ ಮಾಡುವಲ್ಲಿ ಮಥುರಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕಿ ಹಾಗೂ ನವಜಾತ ಶಿಶುವಿಗೆ ಫರಿದಾಬಾದ್​ನ ಸಿವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಪ್ರಕರಣದ ಮತ್ತಷ್ಟು ವಿವರ:ಆಗಸ್ಟ್​​ 2021ರಲ್ಲಿ ಅಪ್ರಾಪ್ತ ಬಾಲಕಿಯನ್ನು ಚಿಕ್ಕಪ್ಪ ಕರೆದುಕೊಂಡು ಹೋಗಿದ್ದನು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸುಮಾರು 13 ತಿಂಗಳ ಕಾಲ ಶೋಧಕಾರ್ಯ ನಡೆಸಿದ್ದ ಪೊಲೀಸರು ಕೊನೆಗೆ ಇವರನ್ನು ಮಥುರಾದ ಶೇರ್ಗಡ ಪ್ರದೇಶದಲ್ಲಿ ಪತ್ತೆ ಹಚ್ಚಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ:ದಲಿತ ಸಹೋದರಿಯರ ಅತ್ಯಾಚಾರವೆಸಗಿ ಕೊಲೆ; ಸಾಕ್ಷ್ಯ ನಾಶಕ್ಕೆ ಶವಗಳ ನೇಣು ಹಾಕಿದ ದುಷ್ಕರ್ಮಿಗಳು!

ಈ ಸಂದರ್ಭದಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು. ಆಕೆಯನ್ನು ಫರಿದಾಬಾದ್​​ನ ಬಾದ್​ಶಾ ಖಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗೋಸ್ಕರ ಸಿವಿಲ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಕರು ನವಜಾತ ಶಿಶುವನ್ನು ದತ್ತು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ, ಆ ಮಗುವಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ABOUT THE AUTHOR

...view details