ಅಲಿರಾಜ್ಪುರ/ಮಧ್ಯಪ್ರದೇಶ:ಅತ್ಯಾಚಾರಕ್ಕೊಳಗಾದ 16 ವರ್ಷದ ಸಂತ್ರಸ್ತೆ ಹಾಗೂ ಅತ್ಯಾಚಾರವೆಸಗಿದ 23 ವರ್ಷದ ಆರೋಪಿಯನ್ನು ಗ್ರಾಮಸ್ಥರು ಹಗ್ಗದಿಂದ ಕಟ್ಟಿ, ಇಬ್ಬರಿಗೂ ಹೊಡೆಯುತ್ತಾ ಮೆರವಣಿಗೆ ಮಾಡಿರುವ ವಿಚಿತ್ರ ಘಟನೆಯೊಂದು ಅಲಿರಾಜ್ಪುರದ ಬುಡಕಟ್ಟು ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಅತ್ಯಾಚಾರ ಸಂತ್ರಸ್ತೆಯನ್ನ ರಕ್ಷಿಸಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಈ ರೀತಿ ಮೆರವಣಿಗೆ ಮಾಡಿದ ಯುವತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ,ಎಫ್ಐಆರ್ ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು SDOP ದಿಲೀಪ್ ಸಿಂಗ್ ಬಿಲ್ವಾಲ್ ತಿಳಿಸಿದ್ದಾರೆ.