ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ಮಧ್ಯರಾತ್ರಿ ಅತ್ಯಾಚಾರ; ಆರೋಪಿಗಳು ಪರಾರಿ - Andra pradesh rape news

ಅಪ್ರಾಪ್ತೆ ಮೇಲೆ ಕಾಮುಕರು ಅತ್ಯಾಚಾರವೆಸಗಿರುವ ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Andra pradesh rape news
Andra pradesh rape news

By

Published : Sep 2, 2022, 1:38 PM IST

ತಿರುಪತಿ(ಆಂಧ್ರಪ್ರದೇಶ): ಇಡೀ ಊರೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿರುವಾಗಲೇ ಆಂಧ್ರದ ಕೆವಿಬಿ ಪುರಂ ಮಂಡಲದಲ್ಲಿ ಮಧ್ಯರಾತ್ರಿ ಬಾಲಕಿ ಮೇಲೆ ಅತ್ಯಾಚಾರವೆಸಗಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದು, ಘಟನೆ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ತಾಯಿ ನೀಡಿರುವ ಮಾಹಿತಿ ಪ್ರಕಾರ, ಕೆವಿಬಿ ಪುರಂ ಮಂಡಲ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ 14) ತಾಯಿ ಜೊತೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವೀಕ್ಷಣೆಗೆ ತೆರಳಿದ್ದಳು. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ರಾತ್ರಿ 10 ಗಂಟೆ ವೇಳೆ ಮನೆಯಲ್ಲಿ ಬಿಟ್ಟು ವಾಪಸ್​ ಹೋಗಿದ್ದಾಳೆ. ತಡರಾತ್ರಿ 11 ಗಂಟೆಗೆ ವಾಪಸ್​ ಆಗಿದ್ದು, ಈ ವೇಳೆ ಮಗಳು ನಾಪತ್ತೆಯಾಗಿದ್ದು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:ದೇವಸ್ಥಾನಕ್ಕೆ‌ ಕರೆದೊಯ್ಯುವ ನೆಪದಲ್ಲಿ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರ ಬಂಧನ

ಗುರುವಾರ ನಸುಕಿನ ಜಾವ 3 ಗಂಟೆಗೆ ಮನೆಯ ಆವರಣದಲ್ಲಿರುವ ಬಾತ್​​ರೂಮ್​​​ನಲ್ಲಿ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಗ ಆಕೆ, ತಾನು ಬಾತ್​ರೂಂಗೆ ಹೋಗುತ್ತಿದ್ದಾಗ ಅಪಹರಣ ಮಾಡಿರುವ ಸೆಲ್ವಂ, ಗುಣ ಮತ್ತು ಅಶೋಕ್​ ಎಂಬಾತರು ಅತ್ಯಾಚಾರವೆಸಗಿದ್ದಾಗಿ ತಿಳಿಸಿದ್ದಾರೆ. ಸಮೀಪದ ಸ್ಮಶಾನಕ್ಕೆ ಕರೆದೊಯ್ದು ದೊಣ್ಣೆಯಿಂದ ಹೊಡೆದು ಅತ್ಯಾಚಾರವೆಸಗಿದ್ದಾರೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಘಟನೆ ಬೆನ್ನಲ್ಲೇ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details