ಸೂರತ್(ಗುಜರಾತ್):ಗುಜರಾತ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಶಿಕ್ಷೆ ವಿಧಿಸುತ್ತಿದ್ದಂತೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಸೂರತ್ನ ನ್ಯಾಯಾಲಯ 27 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಶಿಕ್ಷೆ ಘೋಷಣೆ ಮಾಡ್ತಿದ್ದಂತೆ ಅಪರಾಧಿ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ.
ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿಎಸ್ ಕಲಾ ಅವರು ಶಿಕ್ಷೆ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಅಪರಾಧಿ ಸುಜಿತ್ ಸಾಕೇತ್ ಕೋಪಗೊಂಡು ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ.
ಇದನ್ನೂ ಓದಿರಿ:ಚಂಡೀಗಢದಲ್ಲಿ ಬಿಜೆಪಿ ಶಾಸಕನ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿ ಪರಾರಿ