ಜಾಫರ್‌ಗಢ್ (ತೆಲಂಗಾಣ ): ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅತ್ಯಾಚಾರ ಎಸಗಿರುವ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಚಿಲ್ಪುರ ಮಂಡಲದ ಶ್ರೀಪತಿಪಳ್ಳಿಯ ಗುರ್ರಂ ಶ್ಯಾಮ್ ಮತ್ತು ತುಪಾಕುಲ ಸಾಂಬರಾಜು ಎಂದು ಗುರುತಿಸಲಾಗಿದೆ.
ಬಂಧಿತ ಶ್ಯಾಮ್ ಎಂಬಾತ ಪ್ರೀತಿಯ ಹೆಸರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಈತನ ಜೊತೆಗಿದ್ದ ಸಾಂಬರಾಜು ಅತ್ಯಾಚಾರವೆಸಗುವ ದೃಶ್ಯವನ್ನು ಚಿತ್ರೀಕರಿಸಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಈ ಇಬ್ಬರು ಆರೋಪಿಗಳು ಈ ವಿಡಿಯೋವನ್ನು ಇತರ ನಾಲ್ಕು ಹುಡುಗಿಯರಿಗೆ ತೋರಿಸಿ, ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ವಿಡಿಯೋಗಳನ್ನು ಚಿತ್ರೀಕರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.