ಕರ್ನಾಟಕ

karnataka

ETV Bharat / bharat

ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋರಿಕೆ - ವಿಶ್ವಕಪ್ ಗೆದ್ದ ಚಿತ್ರಕಥೆ ಉಳ್ಳ 83 ಸಿನಿಮಾ ಸೋರಿಕೆ

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ 83 ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ ಎಂಬ ವಿಚಾರ ಈಗ ಸದ್ದು ಮಾಡ್ತಿದೆ.

Ranveer Singh starrer 83 leaks online hours after its theatrical release
ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋರಿಕೆ

By

Published : Dec 24, 2021, 5:11 PM IST

Updated : Dec 24, 2021, 6:39 PM IST

ಮುಂಬೈ:ಟೀಂ ಇಂಡಿಯಾ ಮೊದಲ ವಿಶ್ವಕಪ್ ಗೆದ್ದ ಚಿತ್ರಕಥೆಯನ್ನು ಆಧರಿಸಿದ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ 83 ತೆರೆಗೆ ಅಪ್ಪಳಿಸಿ, ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ.

ಕೋವಿಡ್ ಕಾರಣದಿಂದ ತಡವಾಗಿ ತೆರೆಗೆ ಬಂದಿರುವ 83 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಪೈರಸಿ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಸೋರಿಕೆಯಾಗಿರುವುದು ಸಿನಿಮಾ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಆನ್​ಲೈನ್ ಸೋರಿಕೆಯನ್ನು ತಡೆಯಲು 83 ತಂಡ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

1983ರ ಕ್ರಿಕೆಟ್ ವಿಶ್ವಕಪ್ ವೇಳೆ ತೆರೆಮರೆಯಲ್ಲಿ ನಡೆದ ಕೆಲವು ಘಟನೆಗಳನ್ನು ಈ ಸಿನಿಮಾದಲ್ಲಿ ಪ್ರಸ್ತುತಗೊಳಿಸಲಾಗಿದೆ. ಭಾರತ ತಂಡ ಚಾಂಪಿಯನ್ ಆಗುವುದರೊಂದಿಗೆ, ಮುಂಬರುವ ಯುವ ಕ್ರಿಕೆಟಿಗರಲ್ಲಿ ಹುಮ್ಮಸ್ಸು ತುಂಬಲು ಕಾರಣವಾದ ಈ ವಿಶ್ವಕಪ್ ಕಥೆಯನ್ನು ಈ ಸಿನಿಮಾ ಹೊಂದಿದೆ.

ಚಿತ್ರಪ್ರೇಮಿಗಳು ಮತ್ತು ವಿಮರ್ಶಕರು 83 ಸಿನಿಮಾವನ್ನು ಹೊಗಳುತ್ತಿದ್ದಾರೆ. ಆದರೆ, ವಿವಿಧ ವೆಬ್​ಸೈಟ್ ಹಾಗೂ ಟೆಲಿಗ್ರಾಮ್​ಗಳಲ್ಲಿ ಮತ್ತು ಟೋರೆಂಟ್​ಗಳಲ್ಲಿ ಈಗಾಗಲೇ ಚಿತ್ರ ಲಭ್ಯವಿದ್ದು, ಚಿತ್ರದ ಗಳಿಕೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಸಿನಿ ಪಂಡಿತರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:ಲಂಡನ್​ನಿಂದ ವಾಪಸಾದ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಡಿವೇಲುಗೆ ಕೊರೊನಾ

Last Updated : Dec 24, 2021, 6:39 PM IST

ABOUT THE AUTHOR

...view details