ಹೈದರಾಬಾದ್: ಗಾಂಧಿ ರಾಷ್ಟ್ರಪಿತ ಎಂದು ನಾನು ಭಾವಿಸುವುದಿಲ್ಲ. ಭಾರತದಂತಹ ದೇಶವು ಒಬ್ಬ ರಾಷ್ಟ್ರಪಿತನನ್ನು ಹೊಂದಲು ಸಾಧ್ಯವಿಲ್ಲ, ಮರೆತು ಹೋದ ಸಾವಿರಾರು ಜನರಿದ್ದಾರೆ ಎಂದು ಸಾರ್ವಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ಹಿಂದುತ್ವದ ಐಕಾನ್ ವೀರ ಸಾರ್ವಕರ್ ಅಂಡಮಾನ್ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್‌ಗೆ ಹೇಳಿದ್ದು, ಮಹಾತ್ಮ ಗಾಂಧೀಜಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಸಾರ್ವಕರ್ ಮೊಮ್ಮಗ ರಂಜಿತ್ ಸಾವರ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಹೆಸರನ್ನು ಜನಪ್ರಿಯಗೊಳಿಸಲು ನಮಗೆ ಗಾಂಧಿ ಹೆಸರು ಪ್ರಸ್ತಾಪದ ಅಗತ್ಯವಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಸಾರ್ವಕರ್ ಮೊಮ್ಮಗ ರಂಜಿತ್ ಸಾವರ್ಕರ್, ಸಾರ್ವಕರ್ ಸಲ್ಲಿಸಿದ್ದು ಕ್ಷಮಾದಾನ ಅರ್ಜಿಯಲ್ಲ. ಲಂಡನ್‌ನ ಎಲ್ಲ ಕ್ರಾಂತಿಕಾರಿಗಳಿಗೆ ಸಾಮಾನ್ಯ ಕ್ಷಮಾದಾನವಾಗಿದೆ.
ಎರಡನೆಯದಾಗಿ, ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ಇದನ್ನು ಸಲ್ಲಿಸಲಾಗಿದೆ. ಗಾಂಧಿಯವರು ಸಾವರ್ಕರ್ ಅವರಿಗೆ ವೈಯಕ್ತಿಕವಾಗಿ ಸಲಹೆ ನೀಡಿದ್ದಾರೆ. 1920ರ ಜನವರಿ 25 ರಂದು ಗಾಂಧಿ ಅವರು ಸಾವರ್ಕರ್‌ಗೆ ಬರೆದಿರುವ ಪತ್ರ ನನ್ನ ಬಳಿ ಇದೆ. ರಾಜನಾಥ್ ಸಿಂಗ್ ಅವರು ಅವರು ಈ ಪತ್ರವನ್ನು ಉಲ್ಲೇಖಿಸಿ ಹಾಗೆ ಹೇಳಿರಬೇಕು. ಅಥವಾ ಬೇರೆ ಯಾವುದೋ ಪತ್ರದಲ್ಲಿ ಇದನ್ನು ಉಲ್ಲೇಖಿಸಿರಬೇಕು ಎಂದಿದ್ದಾರೆ.