ಡೆಹ್ರಾಡೂನ್ (ಉತ್ತರಾಖಂಡ): ಕಳೆದ ಕೆಲ ದಿನಗಳಿಂದ ಉತ್ತರಾಖಂಡದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ರಾಣಿ ಪೋಖರಿ ಗ್ರಾಮದ ಬಳಿ ಇರುವ ಸೇತುವೆ ಕುಸಿದು ಬಿದ್ದಿದೆ.
ವಾಹನಗಳು ಸಂಚರಿಸುತ್ತಾ ಇದ್ದ ವೇಳೆ ಸೇತುವೆಯ ಮಧ್ಯ ಭಾಗ ಕುಸಿದಿದ್ದು, ಕೆಲವ ವಾಹನಗಳು ಸಿಲುಕಿಕೊಂಡಿವೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಮುರಿದು ಬಿದ್ದ ಸೇತುವೆ ಮೇಲೆಯೇ ಬರ್ಸತಿ ನದಿ ಹರಿಯುತ್ತಿದೆ. ಈಗಾಗಲೇ ಭೂಕುಸಿತದಿಂದಾಗಿ ರಿಷಿಕೇಶ್-ದೇವಪ್ರಯಾಗ್, ರಿಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ.