ಕರ್ನಾಟಕ

karnataka

ETV Bharat / bharat

ಚಾಮರಾಜನಗರ ಘಟನೆಯು 'ಯಡಿಯೂರಪ್ಪ ಸರ್ಕಾರದ ಯೋಜಿತ ನಿರ್ಲಕ್ಷ್ಯದಿಂದ ನಡೆದ ಕೊಲೆ' - ಸುರ್ಜೇವಾಲಾ

ಸಿಎಂ ಯಡಿಯೂರಪ್ಪ ಜೀ ಈ ಸಾವಿಗೆ ನೈತಿಕ ಹೊಣೆ ಹೊರುತ್ತಾರೆಯೇ? ಎಂದು ಪ್ರಶ್ನಿಸಿದ್ದು, ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು..

Randeep Singh Surjewala reaction on Chamarajanagar Oxygen tragedy
ರಂದೀಪ್​ ಸಿಂಗ್​ ಸುರ್ಜೇವಾಲಾ

By

Published : May 3, 2021, 1:15 PM IST

ಚಾಮರಾಜನಗರ/ನವದೆಹಲಿ :'ಯಡಿಯೂರಪ್ಪ ಸರ್ಕಾರದ ಯೋಜಿತ ನಿರ್ಲಕ್ಷ್ಯದಿಂದಾಗಿ ನಡೆದಿರುವ ಕೊಲೆ ಇದು' ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ದುರಂತಕ್ಕೆ ಬಿಎಸ್​ವೈ ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್​ ಸಿಂಗ್​ ಸುರ್ಜೇವಾಲಾ ಆರೋಪಿಸಿದ್ದಾರೆ.

ಘಟನೆ ಕುರಿತು ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿರುವ ಕೈ ಮುಖಂಡ ಸುರ್ಜೇವಾಲಾ, ಸಿಎಂ ಯಡಿಯೂರಪ್ಪ ಜೀ ಈ ಸಾವಿಗೆ ನೈತಿಕ ಹೊಣೆ ಹೊರುತ್ತಾರೆಯೇ? ಎಂದು ಪ್ರಶ್ನಿಸಿದ್ದು, ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'ಇದು ಸಾವೋ ಅಥವಾ ಕೊಲೆಯೋ?': ಚಾಮರಾಜನಗರ ಆಕ್ಸಿಜನ್​ ದುರಂತಕ್ಕೆ ರಾಹುಲ್​ ಕಿಡಿ

ಚಾಮರಾಜನಗರ ಕೋವಿಡ್​ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ರೋಗಿಗಳು ಮೃತಪಟ್ಟಿದ್ದು, ಇವರಲ್ಲಿ 13 ಮಂದಿ ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ABOUT THE AUTHOR

...view details