ಕರ್ನಾಟಕ

karnataka

ETV Bharat / bharat

ರಾಣಾ ದಂಪತಿಗಳ ವಿರುದ್ಧದ FIR​ ರದ್ದತಿಗೆ ನಕಾರ: ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್​ - ರಾಣಾ ದಂಪತಿಗಳ ವಿರುದ್ಧದ FIR​

ಸಂಸದೆ ನವನೀತ್​ ಕೌರ್ ಹಾಗೂ ಶಾಸಕ ರವಿ ರಾಣಾ ವಿರುದ್ಧ ದಾಖಲಾಗಿರುವ ಎಫ್ಐಆರ್ ವಜಾಗೊಳಿಸುವಂತೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿ ಇದೀಗ ವಜಾಗೊಂಡಿದೆ.

Rana couple arrest
Rana couple arrest

By

Published : Apr 25, 2022, 5:13 PM IST

ಮುಂಬೈ(ಮಹಾರಾಷ್ಟ್ರ):ಹನುಮಾನ್​ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಣಾ ದಂಪತಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಅದನ್ನ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ವಜಾಗೊಂಡಿದೆ. ತಮ್ಮ ಬಂಧನವನ್ನ ಪ್ರಶ್ನೆ ಮಾಡಿ, ಮುಂಬೈ ಹೈಕೋರ್ಟ್​​ನಲ್ಲಿ ಸಂಸದೆ ನವನೀತ್ ಕೌರ್ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅರ್ಜಿ​ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್​ ವಜಾಗೊಳಿಸಿದೆ.

ರಾಣಾ ದಂಪತಿಗಳ ಬಂಧನಕ್ಕೆ ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇವರ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಅದನ್ನ ರದ್ದುಗೊಳಿಸುವಂತೆ ಅಮರಾವತಿ ಸಂಸದೆ ನವನೀತ್ ಹಾಗೂ ಆಕೆಯ ಪತಿ ರವಿ ರಾಣಾ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಕೇಸ್​ನಲ್ಲಿ ದಂಪತಿಗಳಿಗೆ ಹೈಕೋರ್ಟ್​ನಿಂದಲೂ ಹಿನ್ನೆಡೆಯಾಗಿದೆ.

ಇದನ್ನೂ ಓದಿ:ಹಿಂದುತ್ವದಿಂದ ಶಿವಸೇನೆ ಸಂಪೂರ್ಣ ಹಿಂದೆ ಸರಿದಿದೆ... ಸ್ಪೀಕರ್​ಗೆ ಪತ್ರ ಬರೆದ ನವನೀತ್ ಕೌರ್​

ನ್ಯಾಯಾಲಯವು ರಾಣಾ ದಂಪತಿಗೆ ಈಗಾಗಲೇ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಮತ್ತು ಅವರ ಪತಿಯನ್ನು ನವಿ ಮುಂಬೈನ ತಲೋಜಾ ಜೈಲಿಗೆ ಕಳುಹಿಸಿದೆ. ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ ನಂತರ ದಂಪತಿಯನ್ನು ಶನಿವಾರ ಪೊಲೀಸರು ಬಂಧನ ಮಾಡಿದ್ದಾರೆ.

ABOUT THE AUTHOR

...view details