ಮುಂಬೈ (ಮಹಾರಾಷ್ಟ್ರ):ಟ್ರೈನ್ನಲ್ಲಿ ಯುವಕನೊಬ್ಬ ಕಪ್ಪು ಸ್ಕರ್ಟ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್ ಭರ್ಜರಿ ಹವಾ ಕ್ರಿಯೇಟ್ ಮಾಡಿದೆ. ಹೌದು, ಮುಂಬೈನ ಲೋಕಲ್ ಟ್ರೈನ್ನ ಕಂಪಾರ್ಟ್‌ಮೆಂಟ್‌ನಲ್ಲಿ ಹುಡುಗನೊಬ್ಬ ಕಪ್ಪು ಸ್ಕರ್ಟ್‌ನಲ್ಲಿ ರ‍್ಯಾಂಪ್ ವಾಕ್ ಮಾಡುತ್ತಿರುವುದು ಎಲ್ಲರ ತಲೆ ತಿರುಗುವಂತೆ ಮಾಡಿದೆ. ಇನ್ಸ್ಟಾಗ್ರಾಮ್ನಲ್ಲಿ 73,000ಕ್ಕೂ ಹೆಚ್ಚು ಲೈಕ್ಸ್ ಮತ್ತು 1,800 ಕಾಮೆಂಟ್‌ಗಳು ಬಂದಿವೆ.
ಇನ್‌ಸ್ಟಾಗ್ರಾಮ್ ಖಾತೆ "ಥೆಗುಯಿನಾಸ್ಕರ್ಟ್" ಮೂಲಕ ವೀಡಿಯೊದಲ್ಲಿ ಹಂಚಿಕೊಳ್ಳಲಾಗಿದೆ. ಯುವಕ ಶಿವಂ ಭಾರದ್ವಾಜ್ ಕಪ್ಪು ಸ್ಕರ್ಟ್‌ನಲ್ಲಿ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಯಾಣಿಕರು ದಿಗ್ಭ್ರಮೆಗೊಂಡಂತೆ ಅವನನ್ನು ನೋಡುತ್ತಾರೆ. ಅವರಲ್ಲಿ ಕೆಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದರು.
ಪುರುಷರು ಕೂಡ ಸ್ಕರ್ಟ್ ಧರಿಸಬಹುದು:“ನಾನು ನನ್ನ ರೀಲ್ ಅನ್ನು ಎಡಿಟ್ ಮಾಡುವಾಗ, ಸ್ಥಳೀಯ ರೈಲಿನಲ್ಲಿ ನನ್ನ ರಾಂಪ್ ವಾಕ್‌ಗೆ ಜನರ ಪ್ರತಿಕ್ರಿಯೆಗಳನ್ನು ನೋಡಿದೆ. ನನಗೆ ಅದು ಆಶ್ಚರ್ಯಉಂಟು ಮಾಡಿದೆ. ಕೆಲವರು ಬಾಯಿ ತೆರೆದುಕೊಂಡಿ ನೋಡಿದರೆ. ಆದರೆ, ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು, ನೀನು ಕಲಾವಿದನೇ ಎಂದು ಕೇಳಿದನು. ಇದರಿಂದ ನನ್ನನ್ನು ಅರ್ಥಮಾಡಿಕೊಳ್ಳುವ ಜನರಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಯಿತು ಎಂದು 24 ವರ್ಷದ ಶಿವಂ ತಿಳಿಸಿದರು. ಶಿವಂ ಅವರು ತಮ್ಮನ್ನು ಸಲಿಂಗಕಾಮಿ ಎಂದು ಗುರುತಿಸಿಕೊಳ್ಳುತ್ತಾರೆ.
ಮೇಕಪ್ ಮತ್ತು ಸ್ಕರ್ಟ್‌ಗಳಂತಹ ಉಡುಪುಗಳನ್ನು ಯಾವುದೇ ಲಿಂಗಕ್ಕೆ ಸೀಮಿತಗೊಳಿಸಬಾರದು ಎಂದು ಉತ್ತರ ಪ್ರದೇಶದ ಮೀರತ್‌ನ ಈ ಯುವಕ ಹೇಳುತ್ತಾನೆ. "ಪುರುಷರು ಕೂಡ ಸ್ಕರ್ಟ್ ಧರಿಸಬಹುದು. ಏಕೆಂದರೆ ಇದು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಕಂಡುಬಂದಿಲ್ಲ. ಇದರಿಂದ ಸುತ್ತಮುತ್ತಲಿನ ಜನರಿಗೆ ತುಂಬಾ ಆಶ್ಚರ್ಯವಾಗಿತ್ತದೆ. ಯಾಕೆಂದರೆ ಹುಡುಗನು ಸ್ಕರ್ಟ್ ಧರಿಸಿದ್ದಾನೆ ಎಂದು ಅವರು ನಂಬಲು ಬಯಸುವುದಿಲ್ಲ. ಆದರೆ, ಈಗ ಸಮಯ ಬದಲಾಗುತ್ತಿದೆ ಎಂದು ನಾನು ನಂಬುತ್ತೇನೆ" ಎಂದು ಹೇಳುತ್ತಾರೆ ಶಿವಂ.
ಫ್ಯಾಶನ್ ಕ್ಷೇತ್ರಕ್ಕೆ ಮರಳಿದ ಶಿವಂ:"ಮಹಿಳೆಯರು ಪ್ಯಾಂಟ್‌ಸೂಟ್ ಧರಿಸಿದಾಗ, ಪುರುಷರು ಸಹ ಸ್ಕರ್ಟ್ ಧರಿಸಬಹುದು. ಅದು ಅವರ ಪುರುಷತ್ವದ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಪುರುಷನಾಗಿದ್ದರೆ, ನೀವು ಸ್ಕರ್ಟ್ ಧರಿಸಿದ್ದರೂ ಸಹ ನೀವು ಪುರುಷನಾಗಿಯೇ ಇರುತ್ತೀರಿ" ಎಂದು ಅವರು ತರ್ಕಿಸಿದರು.
ಶಿವಂ ಅವರು ಯಾವಾಗಲೂ ಫ್ಯಾಷನ್‌ನಲ್ಲಿ ಏನನ್ನಾದರೂ ಮಾಡಲು ಬಯಸುತ್ತಾರೆ ಎಂದರು. ಆದರೆ, ಅವರ ಪೋಷಕರ ಒಪ್ಪಿಗೆ ಮತ್ತು ಅನುಮೋದನೆ ಅಷ್ಟು ಸುಲಭವಾಗಿ ಬರಲಿಲ್ಲ. ತನ್ನ ಮಗ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂದು ಬಯಸಿದ್ದ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಫ್ಯಾಶನ್ ಕಂಟೆಂಟ್ಅನ್ನು ತಯಾರಿಸುತ್ತಿದ್ದರಿಂದ ಶಿವಂ, 19 ವರ್ಷದವನಾಗಿದ್ದಾಗ ತನ್ನ ಮನೆಯನ್ನು ತೊರೆಯಲು ಕೇಳಿಕೊಂಡಿದ್ದರು. ನಂತರ ಅವರು ಬಿಪಿಓನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಒಮ್ಮೆ ಅವರು ಹಣ ಸಂಪಾದಿಸಲು ಪ್ರಾರಂಭಿಸಿದ ನಂತರ, ಅವರು ಮತ್ತೆ ಫ್ಯಾಶನ್ ಕ್ಷೇತ್ರಕ್ಕೆ ಮರಳಿದರು.
ಸಕಾರಾತ್ಮಕ ಕಾಮೆಂಟ್‌ಗಳು:ಮೀರತ್‌ನಲ್ಲಿ ಸ್ನೇಹಿತನಿಗಾಗಿ ಸ್ಕರ್ಟ್ ಖರೀದಿಸಿದ ವೇಳೆ, ಶಿವಂಗೆ ಸ್ಕರ್ಟ್‌ಗಳೊಂದಿಗಿನ ಪ್ರೇಮವು ಪ್ರಾರಂಭವಾಯಿತು. ಆದರೆ, ಅದನ್ನು ಸ್ವತಃ ಧರಿಸಿಲು ಪ್ರಯತ್ನಿಸಿದೆ. ಅದರಲ್ಲಿ ಉತ್ತಮವಾಗಿ ಕಾಣುತ್ತೇನೆ ಎನ್ನುವುದನ್ನು ಅರಿತುಕೊಂಡೆ. ಸ್ಕರ್ಟ್‌ನಲ್ಲಿ ವೀಡಿಯೊ ಅಪ್‌ಲೋಡ್ ಮಾಡದಂತೆ ಅವರ ಪ್ರೀತಿಪಾತ್ರರು ಸಲಹೆ ನೀಡಿದ್ದರೂ, ಶಿವಂ ಅವರು ಮಾತ್ರ ಹಿಂಜರಿಯಲಿಲ್ಲ. "theguyinaskirt" ಖಾತೆಯ ಮೂಲಕ ಶಿವಂ ವೀಡಿಯೊ ಅಪ್‌ಲೋಡ್ ಮಾಡತೊಡಗಿದರು ಭಾರೀ ವೈರಲ್ ಆಗುತ್ತಿವೆ.
"ನನ್ನ ಪೋಸ್ಟ್‌ನಲ್ಲಿ ಕನಿಷ್ಠ 90 ಪ್ರತಿಶತದಷ್ಟು ಕಾಮೆಂಟ್‌ಗಳು ಸಕಾರಾತ್ಮಕವಾಗಿವೆ. ಇದು ನನಗೆ ತುಂಬಾ ಆಶ್ಚರ್ಯಕರವಾಗಿದೆ" ಎಂದು ಅವರು ತಿಳಿಸಿದರು. ಇನ್ಸ್ಟಾಗ್ರಾಮ್ನಲ್ಲಿ ಜನರು ಶಿವಂ ಅವರ ವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ, "ನೀವು ಆ ರನ್‌ವೇಯಲ್ಲಿ ನಡೆಯುವುದು ತುಂಬಾ ಚೆನ್ನಾಗಿದೆ'' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಮೆಜೆಸ್ಟಿಕ್ ಪದದಂತೆ ನನ್ನ ದವಡೆ ಕುಸಿಯಿತು" ಎಂದು ಬರೆದಿದ್ದಾರೆ.
ಇದನ್ನೂ ಓದಿ:ರಮೇಶ್ ಚೌಹಾನ್ ಏಕೈಕ ಪುತ್ರಿ ಜಯಂತಿ ಈಗ ಬಿಸ್ಲೇರಿ ಕಂಪನಿ ಉತ್ತರಾಧಿಕಾರಿ..