ಅಮರಾವತಿ: ಕೋವ್ಯಾಕ್ಸಿನ್ ಉತ್ಪಾದನಾ ತಂತ್ರಜ್ಞಾನವನ್ನು ವರ್ಗಾಯಿಸಲು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್-ಎನ್ಐವಿಗಳಿಗೆ ನಿರ್ದೇಶನ ನೀಡುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ಸ್ಥಿತಿಯಲ್ಲಿ ಎಲ್ಲಾ ಲಸಿಕೆಗಳನ್ನು ಪಡೆಯಲು ಹಲವಾರು ತಿಂಗಳುಗಳೇ ತೆಗೆದುಕೊಳ್ಳಬಹುದು. ದಯವಿಟ್ಟು ಅಂತಹ ಎಲ್ಲಾ ಉತ್ಪಾದನಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಸಾಧ್ಯತೆಯನ್ನು ಅನ್ವೇಷಿಸಿ ಹಾಗೆ ಅವುಗಳನ್ನು ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಿ, ಲಸಿಕೆಯನ್ನು ಸಾಧ್ಯವಾದಷ್ಟು ಬೇಗ ಮತ್ತು ಕೈಗೆಟುಕುವ ದರದಲ್ಲಿ ತಲುಪಿಸಲು ಕ್ರಮವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.