ಹೈದರಾಬಾದ್:ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಮೋಜಿ ಫೌಂಡೇಶನ್ ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈಹಾಕಿದೆ. ಹೈದರಾಬಾದ್ನ ಅಬ್ದುಲ್ಲಾಪುರ್ಮೆಟ್ನಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡಕ್ಕೆ ಅಡಿಪಾಯ ಹಾಕಿದೆ.
ರಾಮೋಜಿ ಫೌಂಡೇಶನ್ನಿಂದ ಹೊಸ ಪೊಲೀಸ್ ಠಾಣೆ ನಿರ್ಮಾಣ ರಾಮೋಜಿ ಫೌಂಡೇಶನ್ ಎಂಡಿ ವಿಜಯೇಶ್ವರಿ, ಸಂಸದರು, ಸಚಿವರು, ಸಬಿತಾ ಇಂದ್ರರೆಡ್ಡಿ ಹಾಗೂ ಇರ್ರಾಬೆಲ್ಲಿ ದಯಾಕರ್ ರಾವ್ ಸೇರಿದಂತೆ ಅನೇಕರು ಅಡಿಪಾಯದ ವೇಳೆ ಉಪಸ್ಥಿತರಿದ್ದರು. ರಾಮೋಜಿ ಫೌಂಡೇಶನ್ನ ಈ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡುತ್ತಿದೆ. ರಾಮೋಜಿ ಫಿಲ್ಮ್ ಸಿಟಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಈ ಅತ್ಯಾಧುನಿಕ ಪೊಲೀಸ್ ಠಾಣೆ ನಿರ್ಮಾಣಗೊಳ್ಳಲಿದೆ.
ಇದನ್ನೂ ಓದಿರಿ: 30 ಕೆ.ಜಿ ಕಬ್ಬಿಣದ ಸರಪಳಿಯಿಂದ ಪತ್ನಿಯನ್ನು ಕಟ್ಟಿಹಾಕಿ 'ಶೀಲ' ಕಳೆದುಕೊಂಡ ಗಂಡ!
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಂಸದ ಕೋಮತಿರೆಡ್ಡಿ ವೆಂಕಟರೆಡ್ಡಿ, ಶಾಸಕ ಮಂಚೈರೆಡ್ಡಿ ಕಿಶನ್ ರೆಡ್ಡಿ ಮತ್ತು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಉಪಸ್ಥಿತರಿದ್ದರು. ಈ ವೇಳೆ ರಾಮೋಜಿ ಫೌಂಡೇಶನ್ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು. 2017ರ ಅಕ್ಟೋಬರ್ 11ರಂದು ಸ್ಥಾಪನೆಗೊಂಡಿರುವ ಅಬ್ದುಲ್ಲಾಪುರ್ಮೆಟ್ ಪೊಲೀಸ್ ಠಾಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಕಟ್ಟಡ ನಿರ್ಮಾಣಕ್ಕೆ ರಾಮೋಜಿ ಫೌಂಡೇಶನ್ ಮುಂದಾಗಿದೆ.
ಒಂದು ವರ್ಷದೊಳಗೆ ಕಟ್ಟಡ ಪೂರ್ಣಗೊಳಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದ್ದು, ನೆಲ ಮಹಡಿ ಹಾಗೂ ಮೊದಲ ಮಹಡಿ ಸೇರಿದಂತೆ 9,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ.