ಹೈದರಾಬಾದ್:ಪ್ರವಾಸಿಗರ ಸ್ವರ್ಗ ರಾಮೋಜಿ ಫಿಲ್ಮ್ ಸಿಟಿಗೆ ತೆಲಂಗಾಣ ರಾಜ್ಯ ಪ್ರವಾಸೋದ್ಯಮ- 2021ರ ಪ್ರಶಸ್ತಿ ಲಭಿಸಿದೆ. ಪ್ರವಾಸಿಗರಿಗಾಗಿ ಉತ್ತಮ ಸೇವೆ ನೀಡಿದ್ದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಗೆ ‘ಪ್ರವಾಸಿಗರಿಗೆ ಉತ್ತಮ ನಾಗರಿಕ ಸೇವೆಗಳ ನಿರ್ವಹಣೆ’(Better Civil Services Management for Tourists) ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.
ಸೆಪ್ಟೆಂಬರ್ 27ರಂದು(ನಾಳೆ) ವಿಶ್ವ ಪ್ರವಾಸ ದಿನಾಚರಣೆ ಹಿನ್ನೆಲೆ, ಸಂಜೆ ನಾಲ್ಕು ಗಂಟೆಗೆ ಹೈದರಾಬಾದ್ನ ಬೇಗಂಪೇಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉಳಿದಂತೆ ಫೈವ್ ಸ್ಟಾರ್ ಹೋಟೆಲ್ ಡಿಲಕ್ಸ್ ವಿಭಾಗದಲ್ಲಿ ವೆಸ್ಟಿನ್ ಹೋಟೆಲ್, ಫೈವ್ ಸ್ಟಾರ್ ವಿಭಾಗದಲ್ಲಿ ಬಂಜಾರ ಹಿಲ್ಸ್ ಪಾರ್ಕ್ ಹೈಯರ್ ಹೋಟೆಲ್, ನಗರದ ಹೊರ ವಲಯದಲ್ಲಿ ಗೋಲ್ಕೊಂಡ ರೆಸಾರ್ಟ್ ಪಂಚತಾರಾ ಹೋಟೆಲ್‌ಗೆ ಪ್ರಶಸ್ತಿ ಸಿಕ್ಕಿದೆ.