ಹೈದರಾಬಾದ್:ತೆಲಂಗಾಣದ ಅಪೆಕ್ಸ್ ಟ್ರೇಡ್ ಮತ್ತು ಇಂಡಸ್ಟ್ರಿ ಮಂಡಳಿ, ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ (ಎಫ್‌ಟಿಸಿಸಿಐ) ವತಿಯಿಂದ ನೀಡಲಾಗುವ ಎಕ್ಸಲೆನ್ಸ್ ಪ್ರಶಸ್ತಿ ಗರಿ ರಾಮೋಜಿ ಫಿಲ್ಮ್ ಸಿಟಿಗೆ ದೊರೆತಿದೆ.
ರಾಮೋಜಿ ಫಿಲ್ಮ್ ಸಿಟಿಗೆ ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ನಿಂದ (ಎಫ್‌ಟಿಸಿಸಿಐ) ಪ್ರಶಸ್ತಿ ಗರಿ ಲಭಿಸಿದೆ ಹೈದರಾಬಾದ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ಐಟಿ ಸಚಿವರಾದ ಶ್ರೀ ಕೆ.ಟಿ. ರಾಮರಾವ್ ಅವರು ಶ್ರೀಮತಿ ಚಿ. ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಅವರಿಗೆ ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ರಾಮೋಜಿ ಫಿಲ್ಮ್ ಸಿಟಿಗೆ ಎಫ್ಟಿಸಿಸಿಐಯಿಂದ ಪ್ರಶಸ್ತಿ ಗರಿ ಎಫ್‌ಟಿಸಿಸಿಐನ 22 ವಿಭಾಗಗಳಲ್ಲಿ ಸುಮಾರು 150 ಸಂಸ್ಥೆಗಳು ಪ್ರವೇಶ: ಸುಸ್ಥಿರ ಪ್ರವಾಸೋದ್ಯಮದ ಮೂಲಕ ರಾಮೋಜಿ ಫಿಲ್ಮ್ ಸಿಟಿಯು ಪರಿವರ್ತನಾ ಪಯಣ ಹಾಗೂ ನಾವೀನ್ಯತೆ ಮತ್ತು ಬೆಳವಣಿಗೆ ಜೊತೆಗೆ ಅದು ಬದ್ಧತೆ ಪ್ರತಿಬಿಂಬಿಸುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಗುರುತಿಸಿ ಈ ಪ್ರಮುಖ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಎಫ್‌ಟಿಸಿಸಿಐನ 22 ವಿಭಾಗಗಳಲ್ಲಿ ಸುಮಾರು 150 ಸಂಸ್ಥೆಗಳು ಪ್ರವೇಶ ಪಡೆದಿದ್ದವು. ಪ್ರಸಕ್ತ ವರ್ಷದ ಅತ್ಯುತ್ತಮ ಸ್ಟಾರ್ಟ್ ಅಪ್ ಪ್ರಶಸ್ತಿ ಪರಿಚಯಿಸುವುದರೊಂದಿಗೆ 23 ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. FTCCI 106 ವರ್ಷ ಹಳೆಯದು ಮತ್ತು ಭಾರತದ ಅತ್ಯಂತ ಕ್ರಿಯಾತ್ಮಕ ಪ್ರಾದೇಶಿಕ ಚೇಂಬರ್‌ಗಳಲ್ಲಿ ಒಂದಾಗಿದೆ.
ಈ ಹಿಂದೆ 'ಈಟ್ ರೈಟ್ ಕ್ಯಾಂಪಸ್ ಅವಾರ್ಡ್':ಇತ್ತೀಚಿನ ದಿನಗಳಲ್ಲಿ ರಾಮೋಜಿ ಫಿಲ್ಮ್ ಸಿಟಿ ಗಳಿಸಿದ ಹಲವಾರು ಪ್ರಶಸ್ತಿಗಳಲ್ಲಿ 'ಎಕ್ಸಲೆನ್ಸ್ ಪ್ರಶಸ್ತಿ'ಯೂ ಕೂಡ ಒಂದು. ಡಿಸೆಂಬರ್‌ನಲ್ಲಿ, ಆಹಾರ ಸುರಕ್ಷತೆಯಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ RFC ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ಪ್ರತಿಷ್ಠಿತ 'ಈಟ್ ರೈಟ್ ಕ್ಯಾಂಪಸ್ ಅವಾರ್ಡ್' ಅನ್ನು ಪಡೆದುಕೊಂಡಿತ್ತು.
ರಾಮೋಜಿ ಫಿಲ್ಮ್ ಸಿಟಿಯಲ್ಲಿ 2,500ಕ್ಕೂ ಹೆಚ್ಚು ಚಿತ್ರಗಳ ಚಿತ್ರೀಕರಣ:ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿದೊಡ್ಡ ಚಲನಚಿತ್ರ ನಗರವೆಂದು ಗುರುತಿಸಲ್ಪಟ್ಟಿರುವ ರಾಮೋಜಿ ಫಿಲ್ಮ್ ಸಿಟಿಯು ಚಲನಚಿತ್ರ ನಿರ್ಮಾಪಕರ ಸ್ವರ್ಗ ಮತ್ತು ರಜಾ ದಿನಗಳನ್ನು ಮಾಡುವವರಿಗೆ ಕನಸಿನ ತಾಣವಾಗಿದೆ. ಭವ್ಯವಾದ 2,000 ಎಕರೆಗಳಲ್ಲಿ ಈ ಸಿಟಿ ಹರಡಿಕೊಂಡಿದೆ. ಅದರ ರೀತಿಯ ಚಲನಚಿತ್ರ ಪ್ರೇರಿತ ವಿಷಯಾಧಾರಿತ ಪ್ರವಾಸೋದ್ಯಮ ತಾಣವಾಗಿದೆ. ಪ್ರತಿ ವರ್ಷ, ಸುಮಾರು 200 ಚಿತ್ರ ಸಂಸ್ಥೆಗಳು ತಮ್ಮ ಕನಸುಗಳನ್ನು ನನಸಾಗಿಸಲು ಫಿಲ್ಮ್ ಸಿಟಿಗೆ ಬರುತ್ತವೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ಎಲ್ಲ ಭಾರತೀಯ ಭಾಷೆಗಳಲ್ಲಿ 2,500ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ:ಎನ್‌ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ, ಮುಖ್ಯ ಸಚೇತಕರಾಗಿ ಅನಿಲ್ ಪಾಟೀಲ್ ನೇಮಕ.. ಅಜಿತ್ ಪವಾರ್ ಘೋಷಣೆ