ಅಯೋಧ್ಯೆ(ಉತ್ತರಪ್ರದೇಶ): ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ 10 ದಿನಗಳ ಕಾಲ ಜೂಲನ್ ಹಬ್ಬ ಆಚರಿಸಲಾಗುತ್ತದೆ. ಕೋವಿಡ್ ಸೋಂಕು ಹರಡುವ ದೃಷ್ಟಿಯಿಂದ ಕಳೆದ ವರ್ಷ ಈ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ವರ್ಷ ಕೆಲ ನಿರ್ಬಂಧಗಳೊಂದಿಗೆ ಹಬ್ಬದ ಆಚರಣೆಗೆ ಅವಕಾಶ ನೀಡಲಾಗಿದೆ.
Jhulan: 21 ಕೆ.ಜಿಯ ಬೆಳ್ಳಿ ತೂಗುಯ್ಯಾಲೆ ಮೇಲೆ ರಾಮನ ಉತ್ಸವ.. - ಶ್ರಾವಣ ಮಾಸ
ಅಯೋಧ್ಯೆಯಲ್ಲಿ ಜೂಲನ್ ಹಬ್ಬದ ಪ್ರಯುಕ್ತ ಶ್ರೀರಾಮನನ್ನು 21 ಕೆ.ಜಿ.ತೂಕದ ತೂಗುಯ್ಯಾಲೆ ಮೇಲೆ ಕೂರಿಸಲಾಗುವುದು.
ಬೆಳ್ಳಿ ತೂಗುಯ್ಯಾಲೆ
ಈ ವರ್ಷದ ಜೂಲನ್ ಹಬ್ಬವು ಬಹಳ ವಿಶಿಷ್ಟವಾದುದಾಗಿದೆ. ರಾಮಜನ್ಮಭೂಮಿಯಲ್ಲಿ ಶ್ರೀರಾಮನನ್ನು 21 ಕೆ.ಜಿ.ತೂಕದ ಬೆಳ್ಳಿ ಉಯ್ಯಾಲೆ ಮೇಲೆ ಕೂರಿಸಲಾಗಿದೆ. ರಾಮಲಲ್ಲಾ ಆವರಣದಲ್ಲಿ ರಾಮನನ್ನು ಬೆಳ್ಳಿ ಉಯ್ಯಾಲೆ ಮೇಲೆ ಕೂರಿಸಿರುವುದು ಇದೇ ಮೊದಲು. ಶ್ರಾವಣ ಶುಕ್ಲ ತೃತೀಯದಂದು ಆರಂಭವಾಗಿರುವ ಈ ಉತ್ಸವವು ಪೂರ್ಣಿಮಾ ತಿಥಿಯಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಸುರ್ಜೇವಾಲ ಸೇರಿದಂತೆ ಐವರು ನಾಯಕರ ಟ್ವಿಟ್ಟರ್ ಖಾತೆ ಬ್ಲಾಕ್ ಆಗಿದೆ: ಕಾಂಗ್ರೆಸ್