ಕರ್ನಾಟಕ

karnataka

ETV Bharat / bharat

ಲಕ್ಷ್ಮಿ ಬಜಾರ್‌ನಲ್ಲಿ 'ರ‍್ಯಾಂಬೋ' ಮೇಕೆಯದ್ದೇ ಹವಾ..! ಇದರ ಬೆಲೆ ಎಷ್ಟು ಅಂತೀರಾ? - ಬಕ್ರೀದ್ ಮೇಕೆಯ ಹವಾ

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಕೊರೊನಾ ಬಿಕ್ಕಟ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ಬಕ್ರೀದ್​ಗಾಗಿ ಮೇಕೆಗಳ ಖರೀದಿ ಕೂಡ ಜೋರಾಗಿದೆ.

rambo-goat-in-lakshmi-bazaar-pune
ಲಕ್ಷ್ಮಿ ಬಜಾರ್‌ನಲ್ಲಿ 'ರ‍್ಯಾಂಬೋ' ಮೇಕೆಯ ಹವಾ...

By

Published : Jul 8, 2022, 10:38 PM IST

ಪುಣೆ (ಮಹಾರಾಷ್ಟ್ರ): ಮುಸ್ಲಿಮರ ಪ್ರಮುಖ ಬಕ್ರೀದ್​ ಸಮೀಪಿಸುತ್ತಿದ್ದು, ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಮಹಾರಾಷ್ಟ್ರದ ಪುಣೆಯ ಲಕ್ಷ್ಮಿ ಬಜಾರ್‌ನಲ್ಲಿ 'ರ‍್ಯಾಂಬೋ' ಎಂಬ ಮೇಕೆ ಜನರ ಗಮನ ಸೆಳೆಯುತ್ತಿದೆ.

ರಾಜಸ್ಥಾನದಿಂದ ತಂದಿರುವ ಈ 'ರ‍್ಯಾಂಬೋ' ಮೇಕೆಯನ್ನು ನೋಡಲು ಜನರು ಕಿಕ್ಕಿರಿದು ಸೇರುತ್ತಿದ್ದಾರೆ. ಈ ಮೇಕೆ 7 ಅಡಿ ಎತ್ತರವಿದ್ದು, ಇದು ಕುದುರೆಯಂತೆಯೇ ಕಾಣುತ್ತಿದೆ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಬೆಲೆ 60 ಸಾವಿರ ರೂಪಾಯಿ ಎಂದು ಮಾಲೀಕರು ಹೇಳಿದ್ದಾರೆ.

ಲಕ್ಷ್ಮಿ ಬಜಾರ್‌ನಲ್ಲಿ 'ರ‍್ಯಾಂಬೋ' ಮೇಕೆಯ ಹವಾ...

ಲಕ್ಷ್ಮಿ ಬಜಾರ್‌ನಲ್ಲಿ ಔರಂಗಾಬಾದ್, ಜಲ್ನಾ, ಬೀಡ್, ಅಹಮದ್‌ನಗರ, ಪರ್ಭಾನಿ, ಮುಂಬೈ, ಕಲ್ಯಾಣ್ ಮತ್ತು ಥಾಣೆಯಿಂದಲೂ ಮೇಕೆಗಳನ್ನು ತರಲಾಗುತ್ತಿದೆ. ಉಸ್ಮಾನಾಬಾದಿ ಗವರನ್ ಬೊಕ್ಡಾ ಎಂಬ ಮೇಕೆಗೂ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ 10 ಸಾವಿರ, 12 ಸಾವಿರ, 25 ಸಾವಿರ, 60 ಸಾವಿರ ರೂ. ಹಾಗೂ 1 ಲಕ್ಷ ಮೌಲ್ಯದ ಮೇಕೆಗಳೂ ಮಾರುಕಟ್ಟೆಗೆ ಬಂದಿವೆ.

ಇದನ್ನೂ ಓದಿ:ಸರ್ಕಾರ ಭದ್ರಪಡಿಸಿಕೊಳ್ಳಲು ಶಿಂದೆ ಭರಪೂರ ಅನುದಾನ.. ಬಂಡಾಯ ಶಾಸಕರ ಮನತಣಿಸಲು ಜಾಣ ನಡೆ

ABOUT THE AUTHOR

...view details