ವಾರಾಣಾಸಿ: ಬ್ಯಾಂಕ್ಗಳಲ್ಲಿ ಮನೆ, ಹೊಲ, ಆಸ್ತಿಗಳ ಮೇಲೆ ಸಾಲ ಪಡೆಯುವುದು ಸಾಮಾನ್ಯ. ಆದರೆ, ವಾರಾಣಾಸಿಯ ಈ ಬ್ಯಾಂಕ್ ಬಲು ವಿಶೇಷ. ಕಾರಣ ಇಲ್ಲಿನ ಜನರು ಆದರ್ಶ ಪುರುಷ ರಾಮನ ಹೆಸರಿನಲ್ಲಿ ಸಾಲ ಪಡೆಯುತ್ತಾರೆ. ಈ ರೀತಿ ದೇವರ ಹೆಸರಿನಲ್ಲಿ ಪಡೆದ ಸಾಲವನ್ನು ಸಾಲಗಾರರು 8 ತಿಂಗಳು ಮತ್ತು 10 ದಿನದಲ್ಲಿ ವಾಪಸ್ ಮಾಡಬೇಕು. 1926 ರಲ್ಲಿ ರಾಮ ನವಮಿಯ ದಿನದಂದೇ ಬಾಬಾ ಸತ್ಯರಾಮ್ ದಾಸ್ ಅವರ ಸೂಚನೆಯ ಮೇರೆಗೆ ದಾಸ್ ಚನ್ನುಲಾಲ್ ಎನ್ನುವವರು ರಾಮ್ ರಮಾಪತಿ ಬ್ಯಾಂಕ್ ಅನ್ನು ಸ್ಥಾಪಿಸಿದರು. ಪ್ರಸ್ತುತ ಈ ಬ್ಯಾಂಕಿಗೆ ಮ್ಯಾನೇಜರ್ ಇದ್ದು, ಲಕ್ಷನೂ ಲಕ್ಷ ಸಂಖ್ಯೆಯಲ್ಲಿ ಖಾತೆದಾರರಿದ್ದಾರೆ. ಅವರು ಬ್ಯಾಂಕ್ನಿಂದ ನೀಡಲಾಗುವ ಕೆಂಪು ಪೆನ್ನು ಮತ್ತು ಪೇಪರ್ನಲ್ಲಿ 1.25 ಲಕ್ಷ ಬಾರಿ ರಾಮನ ಹೆಸರನ್ನು ಬರೆದು ಖಾತೆಗೆ ಜಮೆ ಮಾಡಬೇಕು.
96 ವರ್ಷದ ಇತಿಹಾಸ: ಈ ಸಂಬಂಧ ಈಟಿವಿ ಭಾರತ್ನೊಂದಿಗೆ ಬ್ಯಾಂಕ್ ಮ್ಯಾನೇಜರ್ ಸುಮಿತ್ ಮೆಹರೊತ್ರಾ ಮಾತನಾಡಿದ್ದಾರೆ. ನನ್ನ ಅಜ್ಜನ ಅಜ್ಜ ದಾಸ್ ಚನ್ನು ಲಾಲ್ ಜಿ ಈ ಬ್ಯಾಂಕ್ ಅನ್ನು 96 ವರ್ಷದ ಹಿಂದೆ ಸ್ಥಾಪಿಸಿದರು. ಈ ಬ್ಯಾಂಕ್ಗೆ ರಾಮ್ ರಾಮ್ಪತಿ ಬ್ಯಾಂಕ್ ಹೆಸರಿಡಾಗಿದ್ದು, ಜನರು ಇದನ್ನು ವಾಣಿಜ್ಯ ಬ್ಯಾಂಕ್ ಎಂದು ಭಾವಿಸುತ್ತಾರೆ. ಈ ಬ್ಯಾಂಕ್ನ ಬಗ್ಗೆ ತಿಳಿಯದ ಮಂದಿ ಇಲ್ಲಿ ವಾಣಿಜ್ಯ ಸಾಲವನ್ನು ನೀಡಲಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದು ಆಧ್ಯಾತ್ಮಿಕ ಬ್ಯಾಂಕ್ ಆಗಿದೆ. ಇಲ್ಲಿ ಹಣಕ್ಕೆ ಮಾನ್ಯತೆ ಇಲ್ಲ. ಈ ಬ್ಯಾಂಕ್ನಲ್ಲಿ ಯಾವುದೇ ವಿತ್ತೀಯ ವಹಿವಾಟು ನಡೆಯುವುದಿಲ್ಲ. ತಮ್ಮ ಆಸೆ ಈಡೇರಿಕೆಗಾಗಿ ಮಾತ್ರ ಜನರು ಇಲ್ಲಿ ಲೋನ್ ಪಡೆಯುತ್ತಾರೆ. ಇಲ್ಲಿ ಲೋನ್ ಪಡೆದ ಬಳಿಕ ಜನರು ತಮ್ಮ ಬೇಡಿಕೆಯನ್ನು ಪೂರೈಸಿಕೊಂಡಿದ್ದಾರೆ.
ಇಲ್ಲಿ ಜಮೆಯಾಗುವುದು ರಾಮನಾಮ: ರಾಮ್ ರಾಮಪತಿ ಬ್ಯಾಂಕ್ ಪ್ರಪಂಚದ ವಿಶಿಷ್ಟ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಸಾಮಾನ್ಯ ಬ್ಯಾಂಕ್ನಂತೆ ಎಲ್ಲಾ ಆಫರ್ ನೀಡುತ್ತದೆ. ಈ ಬ್ಯಾಂಕ್ಗೂ ಮ್ಯಾನೇಜರ್ ಇದ್ದು, ಅಕೌಂಟೆಟ್ ಮತ್ತು ಇತರೆ ಸಿಬ್ಬಂದಿಗಳು ಇದ್ದಾರ. ಇವರು ಬ್ಯಾಂಕ್ನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಇದು ಸಾಲ ನೀಡುತ್ತದೆ. ಪ್ರಸ್ತುತ 19 ಬಿಲಿಯನ್, 42 ಕೋಟಿ, 34 ಲಕ್ಷ ಮತ್ತು 25 ಸಾವಿ ಪ್ರತಿಗಳು ರಾಮನ ಹೆಸರಿನಲ್ಲಿ ಇಲ್ಲಿ ಡೆಪಾಸಿಟ್ ಮಾಡಲಾಗಿದೆ.