ನಾಗ್ಪುರ:ದೇವಾಲಯದ ಮುಖ್ಯ ರಚನೆ ಸೇರಿದಂತೆ ಅಯೋಧ್ಯೆಯ ರಾಮ ಮಂದಿರದ ನಿರ್ಮಾಣಕ್ಕೆ ಸುಮಾರು 1,100 ಕೋಟಿ ರೂ. ವೆಚ್ಚವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮ ಮಂದಿರದ ನಿರ್ಮಾಣವು ಈ ವೆಚ್ಚದಡಿ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಂದಾಜು ಮಾಡಿದರು.
ಎಂಜಿನಿಯರ್‌ಗಳು ದೇವಾಲಯದ ಅಡಿಪಾಯಕ್ಕಾಗಿ ಯೋಜನೆಯನ್ನು ರೂಪಿಸುತ್ತಿದ್ದಾರೆ. ಮಂದಿರದ ಮುಖ್ಯ ದೇವಸ್ಥಾನ ನಿರ್ಮಾಣಕ್ಕೆ 300 ಕೋಟಿ ರೂ.ಗಳಿಂದ 400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇಡೀ ದೇವಸ್ಥಾನ ಪೂರ್ಣಗೊಳ್ಳಲು 1,100 ಕೋಟಿ ರೂ.ಗಿಂತ ಕಡಿಮೆ ಆಗದು. ಇದು ನಾವು ಗ್ರಹಿಸಿರುವ ಅಂದಾಜು ಮೊತ್ತ ಎಂದಿದ್ದಾರೆ.