ಅಸನ್ಸೋಲ್ (ಪಶ್ಚಿಮ ಬಂಗಾಳ):ಅಕ್ಟೋಬರ್ 30, 1990ರಂದು ಮುಲಾಯಂ ಸಿಂಗ್ ಸರ್ಕಾರವು ಕರಸೇವಕರ ಮೆರವಣಿಗೆಯ ವಿರುದ್ಧ ಗಂಭೀರ ಕ್ರಮ ಕೈಗೊಂಡಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ 16 ಮಂದಿ ಕರಸೇವಕರು ಪ್ರಾಣ ಕಳೆದುಕೊಂಡಿದ್ದರು. ಮಾಜಿ ಸಿಎಂ ಮುಲಾಯಂ ಸಿಂಗ್ ಕೂಡ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ಆ ಭಯಾನಕ ಘಟನೆ ನಡೆದ ದಿನದಂದು, ಅಸನ್ಸೋಲ್ ನಿವಾಸಿ ಅಭಯ್ ಕುಮಾರ್ ಬರ್ನೋವಾಲ್ ಅವರಿಗೆ ಬುಲೆಟ್ ತಗುಲಿತ್ತು. ಆದ್ರೆ, ಅದೃಷ್ಟವಶಾತ್ ಅವರು ಬದುಕುಳಿದರು. ಅವರು 21 ವರ್ಷದವರಿದ್ದಾಗ ಅಭಯ್ ಬರ್ನ್ವಾಲ್ ರಾಮಜನ್ಮಭೂಮಿ ಆಂದೋಲನದಲ್ಲಿ ವಿವಿಧ ಅಡೆತಡೆಗಳನ್ನು ಮಧ್ಯೆಯೇ, ಅಯೋಧ್ಯೆಗೆ ತಲುಪಲು 350 ಕಿಲೋಮೀಟರ್‌ಗಳವರೆಗೆ ನಡುಗೆ ಪ್ರಯಾಣ ಪೂರ್ಣಗೊಳಿಸಿದ್ದರು. ಇದೀಗ ಜನವರಿ 22ರಂದು ರಾಮಮಂದಿರದಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಭಯ್ ಕುಮಾರ್ ಬರ್ನೋವಾಲ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಅಭಯ್ ಕುಮಾರ್ ಬರ್ನೋವಾಲ್ ಈಟಿವಿ ಭಾರತ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಎಲೆಕ್ಟ್ರಾನಿಕ್ಸ್ ಡೀಲರ್ ಆಗಿದ್ದು, ಅವರ ಪತ್ನಿ ಸುಷ್ಮಾ ಅವರೊಂದಿಗೆ ವಾಸಿಸುತ್ತಿದ್ದಾರೆ. ಅವರ ಮೂವರು ಮಕ್ಕಳು ಐಐಟಿಯನ್ನು ಮುಗಿಸಿದ್ದಾರೆ. 1990ರಲ್ಲಿ ಕರಸೇವಕರ ಮೇಲೆ ನಡೆದ ಹೋರಾಟದಲ್ಲಿ ಅವರ ಕಾಲಿಗೆ ಗುಂಡು ತಗುಲಿತ್ತು. ಬರ್ನೋವಾಲ್‌ಗೆ ಅಯೋಧ್ಯೆಗೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ.
ರಾಮ ಲಲ್ಲಾ ಪ್ರತಿಷ್ಠಾಪನೆ: ಅಂದು ಗುಂಡು ತಗುಲಿದ್ದ ಕರಸೇವಕನಿಗೆ ಆಮಂತ್ರಣ "ಅಕ್ಟೋಬರ್ 21 ರಂದು ನಾವು ಅಸನ್ಸೋಲ್‌ನಿಂದ ಹೊರಟಿದ್ದೆವು. ಅಕ್ಟೋಬರ್ 22 ರಂದು ನಾವು ವಾರಣಾಸಿ ತಲುಪಿದ್ದೆವು. ಆ ಸಮಯದಲ್ಲಿ ಮುಲಾಯಂ ಸಿಂಗ್ ಅವರು ಅಯೋಧ್ಯೆಗೆ ಪ್ರವೇಶಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ವಾರಣಾಸಿ ನಿಲ್ದಾಣದಲ್ಲಿ ಇಳಿದಾಗ, ಸುತ್ತಲೂ ಪೊಲೀಸರನ್ನು ನಿಯೋಜಿಸಿರುವುದನ್ನು ನೋಡಿದ್ದೆ. ಆದರೆ, ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು ವಾರಣಾಸಿ ನಿಲ್ದಾಣದಿಂದ ಹಿಂದಿನ ಗೇಟ್ ಮೂಲಕ ನುಸುಳಿದೆವು'' ಎಂದು ಬರ್ನೋವಾಲ್ ಹೇಳಿದರು.
ನಂತರ ಅಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ಸ್ನಾನ ಮಾಡಿ ನಂತರ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಇಡೀ ಉತ್ತರಪ್ರದೇಶವೇ ಕೋಟೆಯಂತಿದ್ದು, ಹಳ್ಳಿ, ಪಟ್ಟಣಗಳನ್ನು ತಪ್ಪಿಸಿ ಅಯೋಧ್ಯೆ ತಲುಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅರಣ್ಯದ ಹಾದಿಯ ಮೂಲಕ ಪ್ರಯಾಣಿಸಿದ್ದೆವು'' ಎಂದು ನೆನಪು ಮಾಡಿಕೊಂಡರು.
"ಕಾಲು ನಡುಗೆಯಲ್ಲಿ ಸಾಗುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಅದೆಲ್ಲವನ್ನು ಲೆಕ್ಕಿಸದೇ ನಾನು ಅಯೋಧ್ಯೆಯನ್ನು ತಲುಪಲು ನಿರ್ಧರಿಸಿದ್ದೆ. ನಾವು ಇತರರೊಂದಿಗೆ ಅಕ್ಟೋಬರ್ 28 ರಂದು ಅಯೋಧ್ಯೆಗೆ ತಲುಪಿದ್ದೆವು. ಸ್ವಯಂಬರ್ ನಗರದ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡಿದ್ದೆವು. ಅಕ್ಟೋಬರ್ 30 ರಂದು ಅಯೋಧ್ಯೆಗೆ ಪ್ರವೇಶಿಸಿದಾಗ ಎಲ್ಲೆಡೆ ಭಾರಿ ಪೊಲೀಸ್ ಬಂದೋಬಸ್ತ್ ಇತ್ತು. ಈ ಮಧ್ಯೆ, ಇದ್ದಕ್ಕಿದ್ದಂತೆ ನಾವು ಎಲ್ಲಾ ಮೂಲೆಗಳಿಂದ ಅಯೋಧ್ಯೆಗೆ ಬರುತ್ತಿರುವ ಸಾವಿರಾರು ಕರ ಸೇವಕರನ್ನು ನೋಡಿದ್ದೆವು" ಎಂದು ಅವರು ತಿಳಿಸಿದ್ದಾರೆ.
"ಆ ಸಮಯದಲ್ಲಿ ಒಬ್ಬ ಸಂತನು ಬಸ್ಸನ್ನು ತೆಗೆದುಕೊಂಡು ರಾಮ ಮಂದಿರದ ಸ್ಥಳಕ್ಕೆ ಹೋಗಲು ಬಯಸುವವರಿಗೆಲ್ಲ ಬಸ್ಸು ಹತ್ತಲು ಹೇಳಿದನು. ನಾವೆಲ್ಲರೂ ಒಳನುಗ್ಗಿದೆವು. ನಾನು ಬಸ್ಸಿನ ಮೇಲೆ ಕುಳಿತೆವು. ಬಸ್ ಬ್ಯಾರಿಕೇಡ್ ಅನ್ನು ಮುರಿದು ಪ್ರವೇಶಿಸಿತು. ನೇರವಾಗಿ ದೇವಸ್ಥಾನದ ಮುಂದೆ ನಿಂತಿತ್ತು. ನಾನು ಗುಮ್ಮಟದ ಮೇಲೆ ಹತ್ತಿ ಧ್ವಜವನ್ನು ನೆಟ್ಟಿದ್ದೆ. ಕೆಳಗಿಳಿದ ಇಳಿದ ನಂತರ, ನಮ್ಮ ಸುತ್ತಲೂ ಗುಂಡಿನ ದಾಳಿ ನಡೆದಿತ್ತು. ನನ್ನ ಮುಂದೆ ಇದ್ದ ಅನೇಕ ಜನರಿಗೆ ಗುಂಡು ತಗುಲಿತ್ತು. ಅದರಲ್ಲಿ ಒಂದು ಗುಂಡು ನನ್ನ ಕಾಲಿಗೂ ತಗುಲಿತ್ತು. ನಂತರ ನಾನು ಪ್ರಜ್ಞೆ ಕಳೆದುಕೊಂಡೆ, ಆದ್ರೆ ಬದುಕಿಳಿದೆ. ಸುಮಾರು 72 ಗಂಟೆಗಳ ನಂತರ ನನಗೆ ಪ್ರಜ್ಞೆ ಬಂದಿತ್ತು. ನಾನು ಕಣ್ಣು ತೆರೆದಾಗ ಆಸ್ಪತ್ರೆಯಲ್ಲಿದ್ದೆ'' ಎಂದು ಬರ್ನೋವಾಲ್ ಹೇಳಿದರು.
''ಇಂದು ಕೇವಲ ತನಗೆ ಮಾತ್ರವಲ್ಲದೇ ಭಾರತೀಯ ಸಾಂಪ್ರದಾಯಿಕ ಧರ್ಮದಲ್ಲಿ ನಂಬಿಕೆಯಿರುವ ಸಮಸ್ತ ಜನತೆಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನನಗೆ ಅಯೋಧ್ಯೆಗೆ ವಿಶೇಷ ಆಹ್ವಾನ ಬಂದಿರುವುದು ಸಂತಸ ತಂದಿದೆ. ಆಮಂತ್ರಣ ಪತ್ರಿಕೆಯನ್ನು ನನ್ನ ಮನೆಗೆ ತಲುಪಿಸಲಾಗಿದೆ. ಅಂದು ನಾನು ಅಯೋಧ್ಯೆಗೆ ಹೋಗಿ ಐತಿಹಾಸಿಕ ದಿನವನ್ನು ಹೆಮ್ಮೆಯಿಂದ ವೀಕ್ಷಿಸುತ್ತೇನೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ಗೆ ಇಸ್ರೇಲ್ ಟಕ್ಕರ್: ಲಕ್ಷದ್ವೀಪ ವಿಶ್ವತಾಣವಾಗಿ ಅಭಿವೃದ್ಧಿ ಮಾಡುವ ಘೋಷಣೆ