ಟಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್‌ವರ್ಮಾ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ನೆರವೇರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಸಾಕಷ್ಟು ಚರ್ಚೆಗಳನ್ನು ಅವರ ಅಭಿಮಾನಿಗಳು ಮತ್ತು ವಿರೋಧಿಗಳಲ್ಲಿ ಹುಟ್ಟುಹಾಕಿದೆ.
ರಾಮ್ ಗೋಪಾಲ್ ವರ್ಮಾ ನೈಜ ಕಥೆಯಾಧರಿಸಿದ ಸಿನಿಮಾವೊಂದಕ್ಕೆ ಸಜ್ಜಾಗಿದ್ದು, ಸಿನಿಮಾದ ಚಿತ್ರೀಕರಣದ ಉದ್ಘಾಟನಾ ಕಾರ್ಯಕ್ರಮಕ್ಕೆ ವಾರಂಗಲ್ ಜಿಲ್ಲೆಯ ವಂಚನಗಿರಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ಗಂಡಿ ಮೈಸಮ್ಮ ದೇವಿಯ ಮೂರ್ತಿಗೆ ವಿಸ್ಕಿ ಅರ್ಪಿಸಿದರು.
ಈ ಕುರಿತು ಫೋಟೋ ಹಂಚಿಕೊಂಡು ಟ್ವೀಟ್ ಮಾಡಿರುವ ವರ್ಮಾ, 'ನಾನು ವೋಡ್ಕಾ ಮಾತ್ರ ಕುಡಿಯುತ್ತೇನೆ. ಆದರೆ ನಾನು ದೇವಿ ಮೈಸಮ್ಮಗೆ ವಿಸ್ಕಿ ಕೊಟ್ಟಿದ್ದೇನೆ.. ಚಿಯರ್ಸ್..' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಅನೇಕ ಮಂದಿ ಹಲವಾರು ರೀತಿಗಳಲ್ಲಿ ಚರ್ಚೆ ನಡೆಸಿದ್ದಾರೆ.