ಹೈದರಾಬಾದ್:ಆಸ್ಕರ್ ಪ್ರಶಸ್ತಿ ಸಮಾರಂಭದ ಹಿನ್ನೆಲೆ ಅಮೆರಿಕಕ್ಕೆ ತೆರಳಿದ್ದ'RRR' ಚಿತ್ರದ ನಟ ರಾಮ್ಚರಣ್ ನಿನ್ನೆ ರಾತ್ರಿ ತವರಿಗೆ ಮರಳಿದ್ದು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇತ್ತೀಚೇಗೆ ರಾಮಚರಣ್ ಮತ್ತು ಎನ್‌ಟಿಆರ್ ನಟನೆಯ RRR ಚಿತ್ರದ 'ನಾಟು ನಾಟು' ಹಾಡಿಗೆ ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ ದೇಶ ಮಾತ್ರವಲ್ಲದೇ ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿತ್ತು. ಅಷ್ಟೇ ಅಲ್ಲದೇ ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಹಾಡು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಗಮನ ಸೆಳೆದಿತ್ತು.
ಇನ್ನು ಸಂಗೀತ ನಿರ್ದೇಶಕ ಕೀರವಾಣಿ ಸಂಯೋಜನೆಯ 'ನಾಟು ನಾಟು' ಹಾಡಿಗೆ ಚಿತ್ರದಲ್ಲಿ ಮಲ್ಟಿಸ್ಟಾರ್ಗಳಾದ ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಸಖತ್ ಫೇಮಸ್ ಆಗಿದ್ದು, ಈ ಹಾಡು ಸಾಮಾಜಿಕಿ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಈ ಹಾಡಿಗೆ ಅನೇಕ ನಟ, ನಟಿಯರು ಸೇರಿದಂತೆ ವಿದೇಶಿಗಳು ಸ್ಟೇಪ್ಸ್ ಹಾಕಿದ್ದ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ.
ಇನ್ನು ಈ ಹಾಡಿಗಾಗಿ ಉಕ್ರೇನ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಹಾಡು ಫೈನಲ್ ಹಂತಕ್ಕೆ ತಲುಪಲು 43 ರಿ ಟೇಕ್‌ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಿನಿಮಾ ತಂಡ ಹೇಳುತ್ತದೆ. ಸಿಪ್ಲಿಗುಂಜ್ ಮತ್ತು ಭೈರವ ಈ ಗೀತೆಗೆ ಧ್ವನಿಯಾಗಿದ್ದರು. ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಿಂದಿಯಲ್ಲಿ 'ನಾಚೋ ನಾಚೋ', ತಮಿಳಿನಲ್ಲಿ 'ನಾಟ್ಟು ಕೂತು', ಕನ್ನಡದಲ್ಲಿ 'ಹಳ್ಳಿ ನಾಟು' ಮತ್ತು ಮಲಯಾಳಂನಲ್ಲಿ 'ಕಾರಿಂತೋಲ್' ಎಂಬ ಹೆಸರಿನಲ್ಲಿ ಹಾಡು ಬಿಡುಗಡೆಯಾಗಿತ್ತು.