ನವದೆಹಲಿ :ರಕ್ಷಾಬಂಧನ ಹಬ್ಬದಂದು ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಶುಭ ಹಾರೈಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ತಮ್ಮ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಕ್ಷಾ ಬಂಧನ.. ತಂಗಿ ಪ್ರಿಯಾಂಕಾಗೆ ರಾಹುಲ್ ಗಾಂಧಿ ಶುಭ ಕೋರಿದ್ದು ಹೀಗೆ.. - ಯಾಂಕಾ- ರಾಹುಲ್ ಫೋಟೋ
ಪ್ರಿಯಾಂಕಾ ಗಾಂಧಿ ಕೂಡ ಟ್ವಿಟರ್ನಲ್ಲಿ ಅಣ್ಣ ರಾಹುಲ್ ಗಾಂಧಿ ಜೊತೆಯಿರುವ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿದ್ದು, ನಮ್ಮಂತೆಯೇ ಎಲ್ಲಾ ಸಹೋದರ-ಸಹೋದರಿಯರೂ ಕೂಡ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ, ಪ್ರೀತಿ ಮತ್ತು ನಗು ಹಂಚಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಹೇಳಿದ್ದಾರೆ..
ಫೇಸ್ಬುಕ್ನಲ್ಲಿ ಪ್ರಿಯಾಂಕಾ-ರಾಹುಲ್ ಜೊತೆಯಿರುವ ಫೋಟೋಗಳನ್ನು ಹಂಚಿಕೊಂಡ ರಾಗಾ, "ನನ್ನ ಸಹೋದರಿಯ ಪ್ರೀತಿ ಮತ್ತು ಬೆಂಬಲಕ್ಕೆ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ನಾವು ಪರಸ್ಪರ ಸ್ನೇಹಿತರು ಮತ್ತು ರಕ್ಷಕರು" ಎಂದು ಬರೆದು ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳನ್ನ ಕೋರಿದ್ದಾರೆ. ಇವರಿಬ್ಬರ ಬಾಲ್ಯದ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ಟ್ವಿಟರ್ನಲ್ಲಿ ಅಣ್ಣ ರಾಹುಲ್ ಗಾಂಧಿ ಜೊತೆಯಿರುವ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿದ್ದು, ನಮ್ಮಂತೆಯೇ ಎಲ್ಲಾ ಸಹೋದರ-ಸಹೋದರಿಯರೂ ಕೂಡ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ, ಪ್ರೀತಿ ಮತ್ತು ನಗು ಹಂಚಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಹೇಳಿದ್ದಾರೆ.