ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಖತ್ರೋ ಕೆ ಖಿಲಾಡಿ ಸೀಸನ್ 11ರಿಂದ ನಟಿ ರಾಖಿ ಸಾವಂತ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲು ಶೋನ ಆಯೋಜಕರು ಸಂಪರ್ಕಿಸಿದ್ದು, ರಾಖಿ ಮಾತ್ರ ಇದನ್ನ ನಿರಾಕರಿಸಿದ್ದಾರೆ.
ಈ ಹಿಂದೆ ಬಿಗ್ಬಾಸ್ನಲ್ಲಿ ಸ್ಪರ್ಧಿಸಿ ಎಂಟರ್ಟೈನ್ಮೆಂಟ್ಗೆ ಮನೆ ಮಾತಾಗಿದ್ದ ರಾಖಿ ಸಾವಂತ್, ಅಭಿನವ್ ಶುಕ್ಲಾರ ಮೇಲೆ ಕ್ರಷ್ ಆಗಿತ್ತು ಅಂತ ಸ್ವತಃ ಅವರೇ ಒಪ್ಪಿಕೊಂಡಿದ್ದರು.
ಅಲ್ಲದೇ ಅಫೇರ್ ನಡೆಸಿದ್ದರು ಎಂದು ರೂಮರ್ಸ್ ಕೂಡ ಹಬ್ಬಿದ್ದವು. ಇದೀಗ ಖತ್ರೋ ಕೆ ಖಿಲಾಡಿ ಸೀಸನ್ 11ರಿಂದ ಆಫರ್ ಬಂದರೂ ನಿರಾಕಿರುಸಿರುವುದು ಕೂಡ ಇದೇ ಅಭಿನವ್ ಶುಕ್ಲಾರಿಂದ ಎಂದು ರಾಖಿ ಹೇಳಿದ್ದಾಳೆ.
ಕಾಫಿ ಷಾಪ್ವೊಂದರ ಬಳಿ ಪಾಪರಾಜಿಗಳಿಗೆ ಸಿಕ್ಕಿದ್ದ ರಾಖಿ ಸಾವಂತ್.. ಇತ್ತೀಚೆಗೆ, ಕಾಫಿ ಷಾಪ್ವೊಂದರ ಬಳಿ ಪಾಪರಾಜಿಗಳಿಗೆ ಸಿಕ್ಕಿದ್ದಾರೆ. ಈ ವೇಳೆ ಖತ್ರೋ ಕೆ ಖಿಲಾಡಿ 11ರ ಆಯೋಜಕರು ವೈಲ್ಡ್ ಕಾರ್ಡ್ ಎಂಟ್ರಿಗಾಗಿ ನನ್ನನ್ನು ಸಂಪರ್ಕಿಸಿದ್ದರು. ಆ ಶೋನಲ್ಲಿ ತರುವ ಯಾವುದೇ ಪ್ರಾಣಿಗಳಿಗೆ ನಾನು ಹೆದರುವುದಿಲ್ಲ ಎಂದಿದ್ದಾರೆ.
ಬಳಿಕ ಅಭಿನವ್ ಶುಕ್ಲಾ ಬಗ್ಗೆ ಕೇಳಿದಾಗ, ಇಲ್ಲ ನಾನು ಅಲ್ಲಿಗೆ ಹೋಗಲು ಇಷ್ಟವಿಲ್ಲ, ರುಬಿನಾ ಅಲ್ಲಿ ಇಲ್ಲ. ನಾನು ಅಭಿನವ್ ಅವರ ಜೊತೆಗೆ ಮತ್ತೊಂದು ಸಂಬಂಧದಲ್ಲಿ ತೊಡಗಿಸಿಕೊಂಡರೆ ಕಷ್ಟ ಎಂದಿದ್ದಾರೆ.