ಅಹಮದಾಬಾದ್ (ಗುಜರಾತ್):ಆಗಸ್ಟ್ 22 ರಂದು ದೇಶಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಮಧ್ಯೆ, ಅಹಮದಾಬಾದ್ನ ಜಮಾಲ್ಪುರ್ ಪ್ರದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಳ್ಳಿ ರಾಖಿಯನ್ನು ತಯಾರಿಸಿದ್ದಾರೆ.
ಕಳೆದ 7 ವರ್ಷಗಳಿಂದ ಮೋದಿಗೆ ರಾಖಿ ಕಳುಹಿಸುತ್ತಿದ್ದಾರೆ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳೆಯರು ಈಟಿವಿ ಭಾರತ ಜೊತೆ ಮಾತನಾಡಿ, ಕಳೆದ 7 ವರ್ಷಗಳಿಂದ ನಾವು ಅಹಮದಾಬಾದ್ನ ಜಮಲ್ಪುರದಿಂದ ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸುತ್ತಿದ್ದೇವೆ ಎಂದು ಹೇಳಿದರು. ಇನ್ನು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಮುಸ್ಲಿಂ ಮಹಿಳೆಯರು ಹಬ್ಬದ ಸಂದರ್ಭದಲ್ಲಿ ಅವರಿಗೆ ರಾಖಿಯನ್ನು ಕಳುಹಿಸಿದ್ದರಂತೆ.
ಕಳೆದ 7 ವರ್ಷಗಳಿಂದ ಮೋದಿಗೆ ರಾಖಿ ಕಳುಹಿಸುತ್ತಿದ್ದಾರೆ ಮುಸ್ಲಿಂ ಮಹಿಳೆಯರು ಈ ವರ್ಷ ನಾವು ಬೆಳ್ಳಿ ರಾಖಿಯನ್ನು ಮಾಡಿದ್ದೇವೆ. ರಕ್ಷಾ ಬಂಧನದ ಸಂದರ್ಭದಲ್ಲಿ ನಾವು ಈ ರಾಖಿಯನ್ನು ಕೋರಿಯರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುತ್ತೇವೆ. ಪ್ರಧಾನಮಂತ್ರಿ ನಮ್ಮ ಸಹೋದರ ಅವರು ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಓರ್ವ ಮಹಿಳೆ ಸಂತಸ ಹೊರಹಾಕಿದ್ದಾರೆ.
ಕಳೆದ 7 ವರ್ಷಗಳಿಂದ ಮೋದಿಗೆ ರಾಖಿ ಕಳುಹಿಸುತ್ತಿದ್ದಾರೆ ಮುಸ್ಲಿಂ ಮಹಿಳೆಯರು ಪ್ರಮುಖ ವಿಷಯ ಎಂದರೆ ಬೆಳ್ಳಿರಾಖಿಯನ್ನು ಮೋದಿಗೆ ಕಳುಹಿಸುವ ಇವರು, ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದ ಕಾರಣ ಅವರ ಪ್ರತಿಮೆಯೊಂದನ್ನು ಮಾಡಿ ಈ ಮುಖಾಂತರ ರಾಖಿ ಕಟ್ಟಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಈ ಮುಸ್ಲಿಂ ಮಹಿಳೆಯರ ಕನಸು ಯಾವಾಗ ನನಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.