ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿಯ ಘಾಜಿಪುರ ಬಾರ್ಡರ್ನಲ್ಲಿ ವರ್ಷಗಳಿಂದಲೂ ಧರಣಿ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದೇ ನವೆಂಬರ್ 26ರಂದು ಈ ಧರಣಿಗೆ ಒಂದು ವರ್ಷ ಸಂಪೂರ್ಣವಾಗಲಿದ್ದು, ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸುವ ಸೂಚನೆ ಸಿಕ್ಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಅನ್ನದಾತರ ಹೋರಾಟ ಹೊಸ ರೂಪ ತಳೆಯುವ ಸೂಚನೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ನವೆಂಬರ್ 26ರ ವರೆಗೆ ಸಮಯಾವಕಾಶವಿದ್ದು, 26ರ ಬಳಿಕ ದೆಹಲಿಗೆ ಇನ್ನಷ್ಟು ರೈತರು ಆಗಮಿಸಲಿದ್ದಾರೆ, ಹಳ್ಳಿ ಹಳ್ಳಿಯಿಂದ ಚಳವಳಿಗೆ ಹಾಜರಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.