ಕರ್ನಾಟಕ

karnataka

ETV Bharat / bharat

ಪ್ರತಿಪಕ್ಷ ನಾಯಕರಾಗಿ ಯೋಗಿ ನೋಡಲು ಬಯಸುತ್ತೇನೆ: ರಾಕೇಶ್​ ಟಿಕಾಯತ್​ - Rakesh Tikait, wants to see CM Yogi as 'leader of Opposition'

ರಾಕೇಶ್ ಟಿಕಾಯತ್ ಬಿಜ್ನೋರ್ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗೆ ಮತ ನೀಡುವಂತೆ ರೈತರಲ್ಲಿ ಮನವಿ ಮಾಡಿದರು. ಟಿಕ್ರಿ ಗ್ರಾಮದಲ್ಲಿ ಟಿಕಾಯತ್, ಬಿಜೆಪಿ ವಿರುದ್ಧ ಮತ ಹಾಕಿ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸಿಖ್ ಸಮುದಾಯದ ರೈತರಿಗೆ ತಿಳಿಸಿದರು.

rakesh-tikait-wants-to-see-cm-yogi-as-leader-of-opposition
ರಾಕೇಶ್​ ಟಿಕಾಯತ್​

By

Published : Jan 27, 2022, 4:07 AM IST

ಬಿಜ್ನೋರ್(ಉತ್ತರಪ್ರದೇಶ): ಉತ್ತರಪ್ರದೇಶ ಚುನಾವಣೆ ಬಳಿಕ ಯೋಗಿ ಆದಿತ್ಯನಾಥ್​ ಅವರನ್ನು ಪ್ರಬಲ ಪ್ರತಿಪಕ್ಷ ನಾಯಕನನ್ನಾಗಿ ನೋಡಲು ಬಯಸುವುದಾಗಿ ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್​ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿರಬೇಕು. ಹಾಗೂ ಶಾಂತಿಯುತ ವಾತಾವರಣದಲ್ಲಿ ಚುನಾವಣೆಗಳು ನಡೆಯಬೇಕು. ಪ್ರತಿ ವ್ಯಕ್ತಿಗೂ ಅವರ ಆಯ್ಕೆಯಂತೆ ಮತ ಚಲಾಯಿಸಲು ಅವಕಾಶವಿದೆ ಎಂದು ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದೇ ವೇಳೆ, ಪ್ರತಿಪಕ್ಷ ನಾಯಕನು ಬಲಶಾಲಿಯಾಗಿರಬೇಕು. ಆ ಸ್ಥಾನಕ್ಕೆ ಯೋಗಿಜಿ ಅವರಿಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಟಿಕಾಯತ್​ ವ್ಯಂಗ್ಯವಾಡಿದರು.

ರಾಕೇಶ್​ ಟಿಕಾಯತ್​ ಹೇಳಿಕೆ

ಬುಧವಾರ ರಾಕೇಶ್ ಟಿಕಾಯತ್ ಬಿಜ್ನೋರ್ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗೆ ಮತ ನೀಡುವಂತೆ ರೈತರಲ್ಲಿ ಮನವಿ ಮಾಡಿದರು. ಟಿಕ್ರಿ ಗ್ರಾಮದಲ್ಲಿ ಟಿಕಾಯತ್, ಬಿಜೆಪಿ ವಿರುದ್ಧ ಮತ ಹಾಕಿ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಸಿಖ್ ಸಮುದಾಯದ ರೈತರಿಗೆ ತಿಳಿಸಿದರು.

ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಿಲ್ಲ ಕೆಲದಿನಗಳ ಹಿಂದೆ ಟಿಕಾಯತ್​ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಬಿಹಾರದಲ್ಲಿ ಹಿಂಸಾರೂಪಕ್ಕೆ ತಿರುಗಿದ ರೈಲ್ವೆ ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿಕೆ

For All Latest Updates

TAGGED:

ABOUT THE AUTHOR

...view details