ಕರ್ನಾಟಕ

karnataka

ETV Bharat / bharat

ಕೃಷಿ ಕಾನೂನು ರದ್ದು - ರೈತರ ಯಶಸ್ಸು: ಈಟಿವಿ ಭಾರತದ ಜೊತೆ ರಾಕೇಶ್ ಟಿಕಾಯತ್ ಹೇಳಿದ್ದಿಷ್ಟು..! - ಈಟಿವಿ ಭಾರತ

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಕೃಷಿ ಕಾನೂನು ಹಿಂಪಡೆದುಕೊಂಡಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ವ್ಯಂಗ್ಯವಾಡಿದರು.

ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್

By

Published : Nov 19, 2021, 12:59 PM IST

ಪಾಲ್ಘರ್ (ಮಹಾರಾಷ್ಟ್ರ): ಅನ್ನದಾತರ ಬೃಹತ್​ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಮೂರು ಕೃಷಿ ಕಾನೂನುಗಳನ್ನು ರದ್ದು (Repeal of three farm laws) ಮಾಡುವುದಾಗಿ ತಿಳಿಸಿದ್ದು, ಇದು ರೈತರ ಯಶಸ್ಸು ಎಂದು ಭಾರತೀಯ ಕಿಸಾನ್​ ಯೂನಿಯನ್​ ರಾಷ್ಟ್ರೀಯ ವಕ್ತಾರ​ (National spokesperson of Bhartiya Kisan Union -BKU) ರಾಕೇಶ್ ಟಿಕಾಯತ್​ (Rakesh Tikait) ಹೇಳಿದ್ದಾರೆ.

ಈಟಿವಿ ಭಾರತದ ಜೊತೆ ರಾಕೇಶ್ ಟಿಕಾಯತ್

ಭಾರತದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 147ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಗೆ ರಾಕೇಶ್ ಟಿಕಾಯತ್ ಆಗಮಿಸಿದ್ದರು.

ಈ ವೇಳೆ, ಕೃಷಿ ಕಾನೂನುಗಳ ರದ್ದು ವಿಚಾರವಾಗಿ ಈಟಿವಿ ಭಾರತದೊಂದಿಗೆ ಮಾತನಾಡಿದ ಟಿಕಾಯತ್ (Rakesh Tikait speaks with ETV Bharat)​, ಎಲ್ಲಿಯವರೆಗೆ ಕನಿಷ್ಠ ಬೆಂಬಲ ಬೆಲೆ (MSP) ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ರೈತರ ಹೋರಾಟ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Farmers Celebration: ಕೃಷಿ ಕಾನೂನುಗಳು ರದ್ದು - ಅನ್ನದಾತರ ಸಂಭ್ರಮ ನೋಡಿ..

ಮೋದಿ ಸರ್ಕಾರ ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹೀಗಾಗಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವ್ಯಂಗ್ಯವಾಡಿದರು.

ABOUT THE AUTHOR

...view details