ಕರ್ನಾಟಕ

karnataka

ETV Bharat / bharat

ಬಿಜೆಪಿ - ಟಿಕಾಯತ್​ ಪೋಸ್ಟರ್​ ವಾರ್​: ಲಖನೌಗೆ ಬಂದೇ ಪ್ರತಿಭಟನೆಗೆ ದಿನಾಂಕ ನಿಗದಿ ಮಾಡುವೆ ಎಂದ ರೈತ ಮುಖಂಡ - twitter war

ಉತ್ತರ ಪ್ರದೇಶ ಬಿಜೆಪಿ ಮತ್ತು ಭಾರತೀಯ ಕಿಸಾನ್​ ಯೂನಿಯನ್ ನಡುವೆ ಪೋಸ್ಟರ್​ ವಾರ್ ಮುಂದುವರೆದಿದ್ದು, ಲಖನೌಗೆ ಬಂದೇ ಪ್ರತಿಭಟನೆಗೆ ದಿನಾಂಕ ನಿಗದಿ ಮಾಡುವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

By

Published : Aug 6, 2021, 7:22 PM IST

ನವದೆಹಲಿ/ಗಾಜಿಯಾಬಾದ್: ಕೃಷಿ ಕಾನೂನಿನ ವಿರುದ್ಧ ಆಂದೋಲನ ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಇತ್ತೀಚೆಗೆ ಪ್ರತಿಭಟನೆ ಮುಂದುವರೆಸುವ ಭಾಗವಾಗಿ ಉತ್ತರ ಪ್ರದೇಶದ ಲಖನೌ ಸುತ್ತಮುತ್ತಲಿನ ರಸ್ತೆಗಳನ್ನು ಮುಚ್ಚುವ ಬಗ್ಗೆ ಮಾತನಾಡಿದ್ದರು. ಆ ಬಳಿಕ ಉತ್ತರ ಪ್ರದೇಶ ಬಿಜೆಪಿ ಮತ್ತು ಭಾರತೀಯ ಕಿಸಾನ್​ ಯೂನಿಯನ್ ನಡುವೆ ಪೋಸ್ಟರ್​ ವಾರ್ ಆರಂಭವಾಗಿದೆ.

ರಾಕೇಶ್ ಟಿಕಾಯತ್ ಅವರ ಹೇಳಿಕೆಗೆ ಜುಲೈ 29ರಂದು ತನ್ನ ಅಧಿಕೃತ ಖಾತೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ವಿವಾದಾತ್ಮಕ ಟ್ವೀಟ್​ ಮಾಡಿತ್ತು. "ಓ ಅಣ್ಣಾ ಲಖನೌದಲ್ಲಿ ಬಹಳ ಹುಷಾರಾಗಿರಿ" ಎಂಬ ಶೀರ್ಷಿಕೆಯೊಂದಿಗೆ ಹಾಗೂ ಟಿಕಾಯತ್​ ಉತ್ತರಪ್ರದೇಶಕ್ಕೆ ಪ್ರವೇಶಸುವ ಮಾರ್ಗದಲ್ಲಿ ವ್ಯಕ್ತಿಯೊಬ್ಬ (ಬಾಹುಬಲಿ) ಅಡ್ಡಗಡ್ಡಿ "ನೀವು ಲಖನೌಗೆ ಹೋಗುತ್ತಿದ್ದೀರಿ ಎಂದು ಕೇಳ್ಪಟ್ಟೆ. ಅಲ್ಲಿ ಯೋಗಿ ಕುಳಿತಿದ್ದಾರೆ" ಎಂದು ಬೆದರಿಸುವ ಕಾರ್ಟೂನ್​​ವೊಂದನ್ನು ಶೇರ್​ ಮಾಡಿತ್ತು. ಇದೇ ಕಾರ್ಟೂನ್​ನಲ್ಲಿ ಟಿಕಾಯತ್​ರನ್ನು ಸಿಎಂ ಯೋಗಿ ಎಳೆದೊಯ್ಯುತ್ತಿರುವುದನ್ನೂ ಪರೋಕ್ಷವಾಗಿ ತೋರಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಕಾಯತ್​, ಬಿಜೆಪಿಯು ಜಾಹೀರಾತುಗಳ ಮೇಲೆ ಅಪಾರ ಪ್ರಮಾಣದ ಹಣ ಸುರಿಯುತ್ತದೆ. ಅವರು ಕಚೇರಿಯಲ್ಲಿ ಕುಳಿತು ಟ್ವೀಟ್​ ಮಾಡುತ್ತಾರೆ, ಆದರೆ, ಅವರಿಗೆ ನೈಜತೆ ಗೊತ್ತಿರುವುದಿಲ್ಲ ಎಂದು ಹೇಳಿದ್ದರು. ಇಂದು ಮತ್ತೆ ತಿರುಗೇಟು ನೀಡಿರುವ ಅವರು, ನಾನು ಲಖನೌದಲ್ಲಿ ಇಂದಿನ ಸಂಜೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ರಿಟ್ವೀಟ್​ ಮಾಡಿರುವ ಭಾರತೀಯ ಕಿಸಾನ್​ ಯೂನಿಯನ್, ಟಿಕಾಯತ್​ ಅವರು ಲಖನೌಗೆ ಬಂದು ಪ್ರತಿಭಟನೆಯ ದಿನಾಂಕವನ್ನೂ ನಿಗದಿ ಮಾಡುತ್ತಾರೆ ಎಂದು ಹೇಳಿದೆ.

ABOUT THE AUTHOR

...view details