ಕರ್ನಾಟಕ

karnataka

ETV Bharat / bharat

ಪ್ರತಿಭಟನೆ ಕೈ ಬಿಟ್ಟರೂ ಕೇಂದ್ರವನ್ನು ಬಿಡದ ರಾಕೇಶ್ ಟಿಕಾಯತ್​: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡ

ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್​​ ಮಾತ್ರ ಕೇಂದ್ರ ಸರ್ಕಾರವನ್ನು ಬಿಡುವ ಮನಸ್ಥಿತಿಯಲ್ಲಿಲ್ಲ. ಗಾಜಿಪುರ ಗಡಿಯನ್ನು ತೊರೆದ 24 ಗಂಟೆಯೊಳಗೆ ಟ್ವೀಟ್ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡ
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡ

By

Published : Dec 16, 2021, 9:46 PM IST

ನವದೆಹಲಿ: ರೈತರ ಆಂದೋಲನವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ರೈತರೂ ಪ್ರತಿಭಟನಾ ಸ್ಥಳದಿಂದ ಹಿಂತಿರುಗಿದ್ದಾರೆ. ಆದರೆ, ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್​​ ಮಾತ್ರ ಕೇಂದ್ರ ಸರ್ಕಾರವನ್ನು ಬಿಡುವ ಮನಸ್ಥಿತಿಯಲ್ಲಿಲ್ಲ. ಗಾಜಿಪುರ ಗಡಿಯನ್ನು ತೊರೆದ 24 ಗಂಟೆಯೊಳಗೆ ಟ್ವೀಟ್ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ರೈತರ ಯಂತ್ರೋಪಕರಣಗಳು ಚೆನ್ನಾಗಿವೆ, ಕೃಷಿಯ ವಿಧಾನವೂ ಚೆನ್ನಾಗಿದೆ, ರೈತರು ಬೆಳೆದ ಬೆಳೆಗಳು ಸಹ ಉತ್ತಮವಾಗಿವೆ. ಆದರೆ, ಇನ್ನೂ ರೈತರು ಸಾಲದ ಸುಳಿಯಲ್ಲಿದ್ದಾರೆ. ಇದರರ್ಥ ಸರ್ಕಾರ ಸರಿಯಾಗಿಲ್ಲ, ಅದು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೇಶದಾದ್ಯಂತ ಮುಷ್ಕರ ಯಶಸ್ವಿಯಾಗಿದೆ, ನಾಳೆಯೂ ಮುಂದುವರಿಯಲಿದೆ: ಶ್ರೀನಿವಾಸ್

ರಾಕೇಶ್ ಟಿಕಾಯತ್​​ ಅವರು ಇತ್ತೀಚಿನ ಹೇಳಿಕೆಯಲ್ಲಿ ಸರ್ಕಾರಗಳಿಗೆ ಉದ್ದೇಶದ ಕೊರತೆಯಿದೆ ಎಂದು ಹೇಳಿದ್ದರು. 1 ವರ್ಷದ ಆಂದೋಲನವು ರೈತರಿಗೆ ತರಬೇತಿ ಕೇಂದ್ರವಾಗಿದೆ. ರೈತರ ಕಷ್ಟಗಳನ್ನು ತೆರೆದ ಕಿವಿಯಿಂದ ಆಲಿಸುವುದು ಉತ್ತಮ, ಮುಂದಿನ ದಿನಗಳಲ್ಲಿ ಯುದ್ಧ ನಡೆಯಲಿದೆ, ಸಿದ್ಧರಾಗಿ ಎಂದು ಎಚ್ಚರಿಸಿದ್ದಾರೆ.

ತಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ ಎಂದು ಹೇಳಿದ್ದು, ರಾಜಕೀಯ ಪಕ್ಷಗಳು ತಮ್ಮ ಪೋಸ್ಟರ್‌ಗಳಲ್ಲಿ ತಮ್ಮ ಹೆಸರು ಅಥವಾ ಫೋಟೋಗಳನ್ನು ಬಳಸದಂತೆ ಒತ್ತಾಯಿಸಿದ್ದರು. ಇದಕ್ಕೂ ಮೊದಲು ದೆಹಲಿಯಿಂದ ಹಿಂದಿರುಗಿದ ಟಿಕಾಯತ್​ ಮೀರತ್‌ನಲ್ಲಿ ರೈತರಿಂದ ಆತ್ಮೀಯ ಸ್ವಾಗತವನ್ನು ಪಡೆದರು.

ABOUT THE AUTHOR

...view details