ನವದೆಹಲಿ/ಗಾಜಿಯಾಬಾದ್: ಗಾಜಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಸ್ವತಃ ಪ್ರತಿಭಟನಾ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಮಾಡಿದ ರೈತ ಮುಖಂಡ - ಗಾಜಿಯಾಬಾದ್
ಪ್ರತಿಭಟನಾ ಸ್ಥಳದಲ್ಲಿ ಹೂವುಗಳನ್ನು ಬೆಳೆಸುವುದನ್ನು ನಾವು ಮುಂದುವರೆಸುತ್ತೇವೆ. ಪ್ರತಿಭಟನಾ ಸ್ಥಳದಲ್ಲಿ ಸ್ವಲ್ಪವೂ ಧೂಳು ಕೂರಲು ಬಿಡುವುದಿಲ್ಲ. ಎಲ್ಲವನ್ನು ಸ್ವಚ್ಛಗೊಳಿಸುತ್ತೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಕಸಗೂಡಿಸಿ ಸ್ವಚ್ಛಗೊಳಿಸಿದ ರೈತ ಮುಖಂಡ ರಾಕೇಶ್ ಟಿಕಾಯತ್
ಈ ಬಗ್ಗೆ ಮಾತನಾಡಿರುವ ಟಿಕಾಯತ್, ಪ್ರತಿಭಟನಾ ಸ್ಥಳದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ಸ್ಥಾಪಿಸಲಾದ ಬೋರ್ಡ್‌ನಲ್ಲಿನ ಧೂಳನ್ನು ಸಹ ನಾವು ಸ್ವಚ್ಛಗೊಳಿಸಿದ್ದೇವೆ. ಎಂಎಸ್ಪಿ ಮತ್ತು ಕೃಷಿ ಕಾನೂನುಗಳನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ರಾಕೇಶ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.