ಕರ್ನಾಟಕ

karnataka

ETV Bharat / bharat

ಅಮಾನತು ನೋಟಿಸ್​ ತಿರಸ್ಕರಿಸಿದ ರಾಜ್ಯ ಸಭಾಧ್ಯಕ್ಷರು: ಸಭಾತ್ಯಾಗ ಮಾಡಿದ ಆಪ್​ ಸಂಸದರು - ಸಭಾತ್ಯಾಗ ಮಾಡಿರುವ ಆಪ್ ಸಂಸದರು

ಅಮಾನತು ನೋಟಿಸ್​ ತಿರಸ್ಕಾರಗೊಳ್ಳುತ್ತಿದ್ದಂತೆ ಸಭಾತ್ಯಾಗ ಮಾಡಿರುವ ಆಪ್ ಸಂಸದರು ಬಿಆರ್​ಎಸ್​ ಸಂಸದರ ಜೊತೆ ಸೇರಿ ಜಂಟಿ ಸಂಸದೀಯ ಸಮಿತಿ ರಚನೆಗೆ ಒತ್ತಾಯಿಸಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

KC Venugopal and Mallikarjuna Kharge
ಕೆ ಸಿ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ

By

Published : Feb 9, 2023, 5:20 PM IST

ನವದೆಹಲಿ: ರಾಜ್ಯಸಭೆಯಲ್ಲಿ ಅದಾನಿ ಗ್ರೂಪ್​ ವಿರುದ್ಧದ ಹಿಂಡೆನ್​ಬರ್ಗ್​ ವರದಿ ಕುರಿತು ಚರ್ಚೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳು ಇಂದೂ ಕೂಡ ತಮ್ಮ ಹಠವನ್ನು ಮುಂದುವರಿಸಿದ್ದು, ನಿನ್ನೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಭಾರತ್ ರಾಷ್ಟ್ರ ಸಮಿತಿಯ ಕೆ.ಕೇಶವ ರಾವ್ ಅವರು ನಿಯಮ 267ರ ಅಡಿಯಲ್ಲಿ ನೀಡಿದ್ದ ಅಮಾನತು ನೋಟಿಸ್ ಅನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಇಂದು ತಿರಸ್ಕರಿಸಿದರು.

ಈ ಹಿನ್ನೆಲೆಯಲ್ಲಿ ಆಮ್​ ಆದ್ಮಿ ಪಕ್ಷ ಸಭಾತ್ಯಾಗ ಮಾಡಿ ಹೊರ ನಡೆಯಿತು. ಸಭಾತ್ಯಾಗ ಮಾಡಿ ಹೊರ ಹೋಗಿರುವ ಆಪ್​ ಹಾಗೂ ಬಿಆರ್​ಎಸ್​ ಸಂಸದರು ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಸಭಾಪತಿ ಅವರು ಎಲ್ಲ ನೋಟಿಸ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ ಸಂಸದ ಸಂಜಯ್ ಸಿಂಗ್, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಅದಾನಿ ವಿವಾದದ ಚರ್ಚೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಆರೋಪಿಸಿದರು.

ಸಂಜಯ್​ ಸಿಂಗ್​ ಅವರು ಬುಧವಾರ ನಿಯಮ 267ರ ಅಡಿ ಎಲ್ಲಾ ಸಂಸದೀಯ ವ್ಯವಹಾರಗಳನ್ನು ಅಮಾನತುಗೊಳಿಸಿ ಅದಾನಿ ಗ್ರೂಪ್​ ವಿವಾದ ಕುರಿತು ಚರ್ಚೆಗೆ ಅವಕಾಶವನ್ನು ನೀಡುವಂತೆ ಸಭಾಧ್ಯಕ್ಷರಿಗೆ ನೋಟಿಸ್​ ಮೂಲಕ ಒತ್ತಾಯಿಸಿದ್ದಾರೆ. ಆ ನೋಟಿಸ್​ನಲ್ಲಿ ಸಂಜಯ್​ ಸಿಂಗ್​ ಅದಾನಿ ಗ್ರೂಪ್​ ಕುರಿತು ಹಿಂಡೆನ್​ಬರ್ಗ್​ ವರದಿ ಹೊರಬಿದ್ದ ಬೆನ್ನಲ್ಲೆ ಅದಾನಿ ಗ್ರೂಪ್​ ಪ್ರಕರಣದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಎಲ್‌ಐಸಿ ಹಣವನ್ನು ಕಳೆದುಕೊಂಡಿವೆ ಎಂದು ಉಲ್ಲೇಖಿಸಿದ್ದರು. ರಾಜ್ಯಸಭಾ ಪೀಠ ಆ ನೋಟಿಸ್ ಅನ್ನು ತಿರಸ್ಕರಿಸಿದ್ದು, ಇದರ ಬೆನ್ನಲ್ಲೆ ಆಮ್​ ಆದ್ಮಿ ಪಕ್ಷದವರು ಸಭಾತ್ಯಾಗ ಮಾಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಮತ್ತೆ ವಾಗ್ದಾಳಿ:ಸದನದ ಎಲ್ಲ ನಿಯಮಗಳನ್ನು ಪರಿಗಣಿಸಿದ ನಂತರ ಮಾತನಾಡಬೇಕು. ಯಾವ ವಿಷಯಗಳನ್ನು ಮಾತನಾಡಬಾರದು ಎಂಬುದರ ಬಗೆಗಿನ ನಿಯಮಗಳನ್ನು ನಾವು ಕೂಡ ಅಧ್ಯಯನ ಮಾಡಿದ್ದೇವೆ. ನಾನು ಈಗಾಗಲೇ ಮೂರು ಪುಟಗಳ ಉತ್ತರವನ್ನು ನೀಡಿದ್ದೇನೆ. ಅದು ಅವರಿಗೆ ತೃಪ್ತಿ ನೀಡಬಹುದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ಪ್ರಧಾನಿ ವಿಷಯವನ್ನು ಬೇರೆ ಕಡೆ ತಿರುಗಿಸುತ್ತಾರೆ- ಖರ್ಗೆ:ನಾವು ನಿನ್ನೆ ಅದಾನಿ ವಿಚಾರದಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಉತ್ತರವೇ ನೀಡಿಲ್ಲ. ಪ್ರಧಾನಿ ಮೋದಿ ಅವರು ಯಾವಾಗಲೂ ನಿಜವಾದ ವಿಷಯವನ್ನು ಬಿಟ್ಟು ಬೇರೆ ವಿಷಯಗಳನ್ನೇ ಮಾತನಾಡುತ್ತಾರೆ. ನಮ್ಮನ್ನು ಮುಖ್ಯ ವಿಚಾರದಿಂದ ಬೇರೆಡೆಗೆ ಕೇಂದ್ರೀಕರಿಸುವಂತೆ ಮಾಡುತ್ತಾರೆ. ನಿನ್ನೆ ಅದಾನಿ ವಿಚಾರದಲ್ಲಿ ನಮ್ಮ ಪ್ರಶ್ನೆಗೆ ಪ್ರಧಾನಿ ಉತ್ತರಿಸಲಿಲ್ಲ. ಮೋದಿ ಜಿ ಯಾವಾಗಲೂ ವಿಷಯಾಂತರ ಮಾಡುತ್ತಾರೆ. ಅದಾನಿ ಹೇಗೆ ಮಿಲಿಯನೇರ್ ಆದರು ಮತ್ತು ಅವರಿಗೆ ಅಂತಹ ಲೆಫ್ಟಿ ಸಾಲಗಳನ್ನು ಹೇಗೆ ನೀಡಲಾಯಿತು ಎಂಬ ಪ್ರಶ್ನೆಗಳನ್ನು ನಾವು ಎತ್ತಿದ್ದೆವು. ಆದರೆ ಅಧ್ಯಾವ ಪ್ರಶ್ನೆಗಳಿಗೂ ಪ್ರಧಾನಿ ಅವರಿಂದ ಉತ್ತರವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ವೇಣುಗೋಪಾಲ್​ ಟೀಕಾಪ್ರಹಾರ:ನಿನ್ನೆ ಇಡೀ ದೇಶವೇ ಅದಾನಿ ವಿಚಾರದಲ್ಲಿ ಪ್ರಧಾನಿಯಿಂದ ಉತ್ತರವನ್ನು ನಿರೀಕ್ಷಿಸುತ್ತಿತ್ತು. ಆದರೆ, ಪ್ರಧಾನಿ ಅದರ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಪ್ರಧಾನಿ ಸತ್ಯವನ್ನು ಹೇಳಲು ಯಾಕೆ ಹೆದರುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದನ್ನೂ ಮುಚ್ಚಿಡಲು ಬಯಸುವುದಿಲ್ಲ ಎಂದ ಮೇಲೆ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವುದಕ್ಕೆ ಯಾಕೆ ಹಿಂದೇಟು ಹಾಕುತ್ತಿದ್ದಾರೆ. ಇಂದಾದರೂ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನಾವು ಮಾತ್ರವಲ್ಲ ಇಡೀ ದೇಶವೇ ಉತ್ತರದ ನಿರೀಕ್ಷೆಯಲ್ಲಿದೆ ಎಂದು ಕಾಂಗ್ರೆಸ್​ ಸಂಸದ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ನಾವು ಲೋಕಸಭೆಯಲ್ಲಿ ಸ್ಪೀಕರ್‌ಗೆ ಪತ್ರ ಬರೆಯುತ್ತಿದ್ದೇವೆ. ಅದು ಹೇಗೆ ಅದನ್ನು ತೆಗೆದುಹಾಕುತ್ತಾರೆ? ಆ ಪತ್ರದಲ್ಲಿ ಒಂದೇ ಒಂದು ಅಸಂಸದೀಯ ಎನಿಸುವ ಪದಗಳು ಇಲ್ಲ. ಅದಾನಿ ವಿದೇಶ ಪ್ರವಾಸದಲ್ಲಿ ಪ್ರಧಾನಿ ಎಷ್ಟು ಬಾರಿ ಪ್ರಯಾಣಿಸಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಕೇಳಿದ್ದರು ಅಷ್ಟೆ. ಅದನ್ನು ತೆಗೆದುಹಾಕುವುದರಿಂದ ಏನು ಪ್ರಯೋಜನ? ಎಂದು ಕೆ ಸಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

ವಿಪ್ ಜಾರಿಗೊಳಿಸಿದ ಬಿಜೆಪಿ:ಈ ನಡುವೆ ಭಾರತೀಯ ಜನತಾ ಪಕ್ಷ ತನ್ನ ಎಲ್ಲಾ ಸಂಸದರಿಗೆ ಫೆಬ್ರವರಿ 13 ರವರೆಗೆ ಸದನದಲ್ಲಿ ಹಾಜರಿರಲು ಮೂರು ಸಾಲಿನ ವಿಪ್ ಜಾರಿ ಮಾಡಿದೆ. ನಿತ್ಯ ಪ್ರತಿಪಕ್ಷಗಳು ಸದನದಲ್ಲಿ ಗಲಾಟೆ ಮಾಡುತ್ತಿರುವುದರಿಂದ, ಪ್ರಮುಖ ಮಸೂದೆಗಳು ಹಾಗೂ ಬಜೆಟ್​ಗೆ ಅನುಮತಿ ಪಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಎಲ್ಲ ಸಂಸದರಿಗೆ ಕಡ್ಡಾಯವಾಗಿ ಹಾಜರಿರುವಂತೆ ವಿಫ್ ಜಾರಿ ಮಾಡಿದೆ.

ಇದನ್ನೂ ಓದಿ:ದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ!

ABOUT THE AUTHOR

...view details