ನವದೆಹಲಿ :ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021ಅನ್ನು ರಾಜ್ಯಸಭೆಯಲ್ಲಿಂದು ವಿರೋಧ ಪಕ್ಷಗಳ ಗದ್ದಲದ ನಡುವೆ ಅಂಗೀಕರಿಸಲಾಯಿತು. ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಮಸೂದೆಯನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ತಿದ್ದುಪಡಿ ಮಸೂದೆ ವೆಚ್ಚವನ್ನು ಕಡಿತಗೊಳಿಸುತ್ತದೆ. ದಿವಾಳಿತನದ ಪರಿಹಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದರು.
ಈ ಪ್ರಕ್ರಿಯೆಯು 120 ದಿನಗಳಲ್ಲಿ ಮುಗಿಯುವುದರಿಂದ MSMEಗಳು ಪರಿಹಾರವನ್ನು ಪಡೆಯುತ್ತವೆ. ಕೋವಿಡ್ ನಡುವೆ ಐಬಿಸಿಯನ್ನು ಸ್ಥಗಿತಗೊಳಿಸಿದ ನಂತರ ನಿರೀಕ್ಷೆಗೆ ವಿರುದ್ಧವಾಗಿ, ಎಂಎಸ್‌ಎಂಇಗಳ ದಿವಾಳಿತನದಲ್ಲಿ ಯಾವುದೇ ಏರಿಕೆಯಿಲ್ಲ ಎಂದು ಸೀತಾರಾಮನ್ ಕಲಾಪಕ್ಕೆ ತಿಳಿಸಿದರು. 2021ರ ಜುಲೈ 28ರಂದು ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಮಸೂದೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆ 2016ಕ್ಕೆ ತಿದ್ದುಪಡಿ ತಂದಿದೆ.