ನವದೆಹಲಿ:2021ರ ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ರಾಜ್ಯಸಭೆಯಲ್ಲಿ ಕಲಾಪ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಹಾಗೂ ಕೆ.ಬಿ.ಶಾಣಪ್ಪ ಸೇರಿದಂತೆ ಇತರರಿಗೆ ಸಂತಾಪ ಸೂಚಿಸಲಾಯಿತು.
ಬಳಿಕ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು ಆಸ್ಕರ್ ಫರ್ನಾಂಡೀಸ್ ಅವರ ರಾಜಕೀಯ ಜೀವನದ ಬಗ್ಗೆ ಮೆಲುಕು ಹಾಕಿ ಸದನವನ್ನು ಮುಂದೂಡಿದರು. ಬಳಿಕ ಆರಂಭವಾದ ಸದನದಲ್ಲಿ ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯರಾದ ಮಹಾರಾಷ್ಟ್ರದ ನ್ಯಾಷನಲ್ ಕಾಂಗ್ರೆಸ್ನ ರಜನಿ ಅಶೋಕ್ರಾವ್, ತಮಿಳುನಾಡಿನ ಮಹ್ಮದ್ ಇಸ್ಮಾಯಿಲ್, ಡಿಎಂಕೆಯ ಕೆ.ಆರ್.ಎನ್ ರಾಜಶೇಖರ್ ಕುಮಾರ್, ಡಾ,ಕನಿಮೋಳಿ ಎನ್ವಿಎಂ ಸೋಮು, ಪಶ್ಚಿಮ ಬಂಗಾಳದ ಲೂಯಿಜಿನ್ ಝಾಕಿ ಪಲೆರೋ ಅವರಿಗೆ ಸಭಾಪತಿ ವೆಂಕಯ್ಯ ನಾಯ್ಡು ಪ್ರಮಾಣ ವಚನ ಬೋಧಿಸಿದರು.