ಮಥುರಾ:ಜಿಲ್ಲೆಯ ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಚುರ್ಮುರಾ ಗ್ರಾಮದಲ್ಲಿ ಆನೆ ಸಂರಕ್ಷಣಾ ಕೇಂದ್ರವಿದೆ. ಇಲ್ಲಿನ ರಾಜು ಎಂಬ ಆನೆಯ ಜನ್ಮದಿನವನ್ನು ಮಂಗಳವಾರ ಸಂರಕ್ಷಣಾ ಕೇಂದ್ರದಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.
ನೋಡಿ: ಮಥುರಾದಲ್ಲಿ ಆನೆಗೆ ಜನ್ಮದಿನ ಸಂಭ್ರಮ; ಕೇಕ್ ತಿಂದು ಖುಷಿಪಟ್ಟ ಗಜರಾಜ - ಮಥುರಾದಲ್ಲಿ ಆನೆ ಜನ್ಮದಿನ ಆಚರಣೆ
ನಿಮ್ಮ ಜನ್ಮದಿನ ಅಥವಾ ನಿಮ್ಮ ಮಗುವಿನ ಹುಟ್ಟುಹಬ್ಬವನ್ನು ನೀವು ಬಹಳ ಆಡಂಬರದಿಂದ ಆಚರಿಸಿರಬೇಕು. ಆದರೆ ಆನೆಯ ಹುಟ್ಟುಹಬ್ಬವನ್ನು ಆಚರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿ ರಾಜು ಎಂಬ ಆನೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ.
ಈ ಸಮಯದಲ್ಲಿ ಆನೆಗೆ ಆಹಾರ ಪದಾರ್ಥಗಳೊಂದಿಗೆ ಕೇಕ್ ಸಹ ತಯಾರಿಸಲಾಗಿತ್ತು. ರಾಜು (ಆನೆ) ತನ್ನ ಹುಟ್ಟುಹಬ್ಬದಂದು ತುಂಬಾ ಸಂತೋಷದಿಂದ ಕಾಣುತ್ತಿದ್ದ. ರಾಜುಗಾಗಿ ವಿಶೇಷ ಕೇಕ್, ಕಲ್ಲಂಗಡಿ, ಸೌತೆಕಾಯಿ, ಬಾಳೆಹಣ್ಣು, ಸೌತೆಕಾಯಿಯನ್ನೂ ಸಹ ತಿನ್ನಲು ನೀಡಲಾಗಿದೆ. ಕೇಕ್ ತಿಂದ ನಂತರ, ರಾಜು ಈಜುಕೊಳದಲ್ಲಿ ಮೋಜು ಮಾಡಿದ್ದಾನೆ.
ಆಗ್ರಾ-ದೆಹಲಿ ಹೆದ್ದಾರಿಯಲ್ಲಿರುವ ಚುರ್ಮುರಾ ಗ್ರಾಮದಲ್ಲಿರುವ ಆನೆ ಸಂರಕ್ಷಣಾ ಕೇಂದ್ರದಲ್ಲಿ ಪ್ರಸ್ತುತ 29 ಆನೆಗಳನ್ನು ಸಾಕುತ್ತಿದ್ದಾರೆ. ರಾಜು ಎಂಬ ಆನೆಯನ್ನು ಏಳು ವರ್ಷಗಳ ಹಿಂದೆ ಆನೆ ಸಂರಕ್ಷಣಾ ಕೇಂದ್ರಕ್ಕೆ ಕರೆತರಲಾಗಿತ್ತು. ದೇಶಾದ್ಯಂತದ ಚಿತ್ರಹಿಂಸೆಗೊಳಗಾದ ಆನೆಗಳನ್ನು ಎಸ್‌ಒಎಸ್ ಸಂಘಟನೆಯ ಅಧಿಕಾರಿಗಳು ಗುಲಾಮಗಿರಿಯ ಸರಪಳಿಯಿಂದ ಮುಕ್ತಗೊಳಿಸುವ ಮೂಲಕ ಇಲ್ಲಿಗೆ ಕರೆತರುತ್ತಿದ್ದಾರೆ.