ಕರ್ನಾಟಕ

karnataka

ರಜೌರಿ ಎನ್‌ಕೌಂಟರ್‌; ಅಡಗಿ ಕುಳಿತ ಉಗ್ರರ ಬೇಟೆಗೆ ಯೋಧರಿಂದ ಮುಂದುವರಿದ ಶೋಧಕಾರ್ಯ

By

Published : Nov 6, 2021, 1:30 PM IST

ಉಗ್ರರ ಅಡಗಿರುವ ಶಂಕೆಯಿಂದ ಜಮ್ಮು-ಕಾಶ್ಮೀರದ ರಜೌರಿಯ ಥನ್ನಾ ಮಂಡಿಯಲ್ಲಿರುವ ಖಬ್ಲಾನ್‌ ಗ್ರಾಮದಲ್ಲಿ ನಿನ್ನೆ ಸಂಜೆಯಿಂದ ಆರಂಭವಾಗಿರುವ ಶೋಧಕಾರ್ಯ ಇಂದು ಕೂಡ ಮುಂದುವರಿದೆ.

Rajouri  Encounter update; Important Rajouri Bufliyaz road remained Closed
ರಜೌರಿ ಎನ್‌ಕೌಂಟರ್‌ ಪ್ರಕರಣ; ಅಡಗಿ ಕುಳಿತ ಉಗ್ರರಿಗಾಗಿ ಶೋಧಕಾರ್ಯ ಮುಂದುವರಿಕೆ

ರಜೌರಿ(ಜಮ್ಮು-ಕಾಶ್ಮೀರ): ರಜೌರಿ ಜಿಲ್ಲೆಯ ಉಪ-ವಿಭಾಗದ ಥನ್ನಾ ಮಂಡಿಯಲ್ಲಿರುವ ಖಬ್ಲಾನ್ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದ ಉಗ್ರರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದೆ. ಕೆಲ ಪೊಲೀಸ್‌ ಮೂಲಗಳ ಪ್ರಕಾರ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, ರಜೌರಿ-ಬುಫ್ಲಿಯಾಜ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿ ಭಯೋತ್ಪಾದಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಉಪವಿಭಾಗದ ಉದ್ದಕ್ಕೂ ಥನ್ನಾ ಮಂಡಿ ಮತ್ತು ದರಹಳ್ಳಿ ಸೇತುವೆಯ ರಸ್ತೆ ಮಾರ್ಗವನ್ನು ನಿನ್ನೆ ಸಂಜೆಯಿಂದ ಬಂದ್‌ ಮಾಡಲಾಗಿದೆ. ಇದರಿಂದ ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿವೆ. ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಕಳೆದ 27 ದಿನಗಳಿಂದ ಮುಂದುವರಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 2 ಜೆಸಿಒಗಳು ಸೇರಿದಂತೆ 11 ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ABOUT THE AUTHOR

...view details