ಕರ್ನಾಟಕ

karnataka

ETV Bharat / bharat

ಇಂದು ಪಶ್ಚಿಮ ಬಂಗಾಳಕ್ಕೆ ರಾಜನಾಥ್​​ ಸಿಂಗ್​​ ಭೇಟಿ : ಸಾರ್ವಜನಿಕ ಸಭೆ ನಡೆಸಲಿರುವ ಸಚಿವರು - ಕೇಂದ್ರ ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್

ಇಂದು ಕೇಂದ್ರ ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತಂತೆ ಸಿಂಗ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ರಾಜನಾಥ್​​ ಸಿಂಗ್​​
Rajnath Singh

By

Published : Mar 25, 2021, 8:13 AM IST

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ರಣ ಕಣ ರಂಗೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬೃಹತ್​ ರ‍್ಯಾಲಿ ಜಾಯ್‌ಪುರ, ತಲ್ದಾಂಗ್ರಾ ಮತ್ತು ಕಾಕ್‌ದ್ವಿಪ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ನಾನು ನಾಳೆ (ಗುರುವಾರ) ಪಶ್ಚಿಮ ಬಂಗಾಳದಲ್ಲಿರುತ್ತೇನೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಟೈನಲ್ಲಿ ರ‍್ಯಾಲಿ ನಡೆಸಿದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮದಿನಿಪುರದಲ್ಲಿ ರೋಡ್ ಶೋ ನಡೆಸಿದ್ದರು.

ಓದಿ: ವಾರಾಣಸಿಯಲ್ಲಿ ‘ರಂಗ್​ಭರಿ ಏಕಾದಶಿ’: ಇದು ಹೋಳಿಯ ಪ್ರಾರಂಭದ ಸಂಕೇತ

294 ಸದಸ್ಯರ ರಾಜ್ಯ ವಿಧಾನಸಭೆಗೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮೇ .02 ರಂದು ಮತ ಎಣಿಕೆ ನಡೆಯಲಿದೆ.

ABOUT THE AUTHOR

...view details