ಕರ್ನಾಟಕ

karnataka

ETV Bharat / bharat

ಬಾಲಾಕೋಟ್​ ದಾಳಿಗೆ ಇಂದಿಗೆ ಎರಡು ವರ್ಷ: ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ - ರಕ್ಷಣಾ ಸಚಿವ ರಾಜನಾಥ್ ಸಿಂಗ್

ದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಭಾರತದ ದೃಢ ಇಚ್ಛೆ ತೋರಿಸಿದೆ ಎಂದು ರಕ್ಷಣಾ ಸಚಿವರು ಟ್ವೀಟ್​ ಮಾಡಿದ್ದಾರೆ.

rajnath-singh-salutes-iaf-on-2nd-anniversary-of-balakot-air-strikes
ರಕ್ಷಣಾ ಸಚಿವ

By

Published : Feb 26, 2021, 11:28 AM IST

ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿಯ ಎರಡನೇ ವಾರ್ಷಿಕೋತ್ಸವದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಪಡೆಯ (ಐಎಎಫ್) ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ಅಭಿನಂದಿಸಿದ್ದಾರೆ.

ದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಭಾರತದ ದೃಢ ಇಚ್ಛೆ ತೋರಿಸಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ಜಮ್ಮು - ಶ್ರೀನಗರ ಹೆದ್ದಾರಿಯಲ್ಲಿ ಸಿಆರ್​ಪಿಎಫ್​ ಪಡೆಯ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಷ್​​-ಎ-ಮೊಹಮ್ಮದ್ (ಜೆಎಂ) ದಾಳಿ ನಡೆಸಿ 40 ಸಿಬ್ಬಂದಿಯನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರ ಎಂಬಂತೆ ಕೆಲವು ದಿನಗಳ ನಂತರ ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೆಎಂ ಶಿಬಿರದ ಮೇಲೆ ಐಎಎಫ್ ವಾಯುದಾಳಿ ನಡೆಸಿತು.

ಫೆಬ್ರವರಿ 26 ರ ಮುಂಜಾನೆ ವಾಯುದಾಳಿ ನಡೆಸಲಾಯಿತು. ಇದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಪಡೆ ಗುರಿಯಾಗಿಸಿಕೊಂಡು ಮರುದಿನ ಆಕ್ರಮಣ ನಡೆಸಲು ಮುಂದಾದ ಪಾಕಿಸ್ತಾನದ ಪ್ರಯತ್ನಗಳು ನಮ್ಮ ಯೋಧರ ಕಾರ್ಯಾಚರಣೆಯಿಂದ ವಿಫಲವಾಯಿತು.

ಕಾದಾಟದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರು ಮಿಗ್ -21 ಬೈಸನ್ ಯುದ್ಧ ವಿಮಾನವನ್ನು ಹಾರಿಸುತ್ತಾ ಪಾಕಿಸ್ತಾನಿ ಜೆಟ್‌ಗಳನ್ನು ಬೆನ್ನಟ್ಟುತ್ತಾ ಬಂದರು. ಪಿಒಕೆಗೆ ದಾಟಿದ ಅವರ ವಿಮಾನವನ್ನು ಹೊಡೆದುರುಳಿಸಲಾಯಿತು. ಇದಾದ ನಂತರ ಸೆರೆಸಿಕ್ಕ ಅವರನ್ನು ಮೊದಲು ಪಾಕಿಸ್ತಾನ ವಶಕ್ಕೆ ತೆಗೆದುಕೊಂಡಿತು.

ABOUT THE AUTHOR

...view details